ಬೇಸಿಗೆಯಲ್ಲಿ ಬಹಳಷ್ಟು ಜನರು ತಂಪು ಪಾನೀಯ ಮತ್ತು ಹಗುರ ಆಹಾರವನ್ನು ತಿನ್ನಲು ಬಯಸುತ್ತಾರೆ, ಏಕೆಂದರೆ ಈ ಕಾಲದಲ್ಲಿ ಜೀರ್ಣಕ್ರಿಯೆ ನಿಧಾನಗತಿಯಲ್ಲಿ ನಡೆಯುತ್ತದೆ. ಆದರೆ ಮಾಂಸಾಹಾರ ಪ್ರಿಯರಿಗೆ, ಈ ಸಮಯದಲ್ಲೂ ಕೋಳಿ ಅಥವಾ ಮೀನು ತಿನ್ನುವ ವಿಚಾರದಲ್ಲಿ ಸಾಕಷ್ಟು ಕುತೂಹಲವಿದೆ.
ಶ್ರೀ ಪುತ್ತಿಗೆ ಮಠದ ಪರ್ಯಾಯ ಸ್ವಾಮೀಜಿ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಅಕ್ಷಯ ತೃತೀಯಾ ಹಬ್ಬದ ಅಂಗವಾಗಿ 30ನೇ ಏಪ್ರಿಲ್ 2025 ರಂದು ಸಂಜೆ 4 ಗಂಟೆಗೆ ಶ್ರೀಕೃಷ್ಣನಿಗೆ ಸುವರ್ಣ ತುಲಾಭಾರ ಸಮರ್ಪಣೆ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ
ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ನಡೆಸುವ ರಾಷ್ಟ್ರಮಟ್ಟದ NIFT ಪರೀಕ್ಷೆಯಲ್ಲಿ ಕ್ರಿಯೇಟಿವ್ ಪದವಿಪೂರ್ವ ಕಾಲೇಜು ಕಾರ್ಕಳದ 13 ವಿದ್ಯಾರ್ಥಿಗಳು ಮೊದಲ ಹಂತದ ಪರೀಕ್ಷೆಯಲ್ಲಿ ತೇರ್ಗಡೆಯನ್ನು ಹೊಂದಿ ಮುಂದಿನ ಹಂತಕ್ಕೆ ಆಯ್ಕೆಯಾಗಿದ್ದಾರೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ನಡೆಸಿದ 2025ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಮರುಮೌಲ್ಯಮಾಪನ ಫಲಿತಾಂಶದಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ನಾಯಕ್ ರಕ್ಷಾ ರಾಮಚಂದ್ರ 597 ಅಂಕ ಪಡೆದು ರಾಜ್ಯಕ್ಕೆ 3 ನೇ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿ ಹೊರ ಹೊಮ್ಮಿರುತ್ತಾರೆ.
ಉಡುಪಿ ಜಿಲ್ಲೆ 80 ಬಡಗಬೆಟ್ಟು ಗ್ರಾಮದ ದಶರಥ ನಗರದಲ್ಲಿರುವ ಡೌನ್ ಟೌನ್ ಲಾಡ್ಜ್ನಲ್ಲಿ ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಮಣಿಪಾಲ ಪೊಲೀಸರು ಎಪ್ರಿಲ್ 22ರಂದು ಮಧ್ಯಾಹ್ನ ಬಂಧಿಸಿದ್ದಾರೆ. ಈ ಸಂಬಂಧ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬೇಸಿಗೆಯಲ್ಲಿ ಬಹಳಷ್ಟು ಜನರು ತಂಪು ಪಾನೀಯ ಮತ್ತು ಹಗುರ ಆಹಾರವನ್ನು ತಿನ್ನಲು ಬಯಸುತ್ತಾರೆ, ಏಕೆಂದರೆ ಈ ಕಾಲದಲ್ಲಿ ಜೀರ್ಣಕ್ರಿಯೆ ನಿಧಾನಗತಿಯಲ್ಲಿ ನಡೆಯುತ್ತದೆ. ಆದರೆ ಮಾಂಸಾಹಾರ ಪ್ರಿಯರಿಗೆ, ಈ ಸಮಯದಲ್ಲೂ ಕೋಳಿ ಅಥವಾ ಮೀನು ತಿನ್ನುವ ವಿಚಾರದಲ್ಲಿ ಸಾಕಷ್ಟು ಕುತೂಹಲವಿದೆ.
ಕಾರ್ಕಳದ ಇರ್ವತ್ತೂರು ಗ್ರಾಮ ಪಂಚಾಯತ್ನಲ್ಲಿ ಬೃಹತ್ ರಾಜೀನಾಮೆ ಅಲೆ ಕಾಣಿಸಿದೆ. ಬಿಜೆಪಿ ಬೆಂಬಲಿತ 7 ಸದಸ್ಯರಲ್ಲಿ ಉಪಾಧ್ಯಕ್ಷೆ ಸೇರಿದಂತೆ 6 ಜನ ಸದಸ್ಯರು ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.