ಬುಧವಾರ ರಾತ್ರಿ ಮನೆಯಿಂದ ನಾಪತ್ತೆಯಾಗಿದ್ದ ಉಚ್ಚ ಶಿಕ್ಷಣ ಪಡೆಯುತ್ತಿದ್ದ ಯುವಕ ತೇಜಸ್ (24) ಅವರ ಛಿದ್ರಗೊಂಡ ಮೃತದೇಹ ಉಚ್ಚಿಲ ಸಂಕೋಳಿಗೆಯ ರೈಲ್ವೇ ಹಳಿಯಲ್ಲಿ ಪತ್ತೆಯಾಗಿದ್ದು, ಇದು ಆತ್ಮಹತ್ಯೆ ಪ್ರಕರಣ ಎಂದು ಶಂಕಿಸಲಾಗಿದೆ.
ನಗರದ ಕೊಡಿಯಾಲ್ ಬೈಲಿನ ಸಬ್ ಜೈಲಿನಲ್ಲಿ ಎರಡು ಕೋಮಿನ ಕೈದಿಗಳು ಪರಸ್ಪರ ಹೊಡೆದಾಡಿಕೊಂಡಿದ್ದು, ಪುತ್ತೂರಿನ ಮೂಲದ ಕೈದಿ ಕೇಶವ ತೀವ್ರವಾಗಿ ಗಾಯಗೊಂಡು ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಅಪರಾಧ ಕೃತ್ಯಗಳ ಕುರಿತು ಮಾಹಿತಿ ಹೊಂದಿರುವ ವ್ಯಕ್ತಿಯೊಬ್ಬನು ಪೊಲೀಸ್ ಠಾಣೆಗೆ ಶರಣಾಗಲು ಸಿದ್ಧನಿದ್ದಾನೆ ಎಂಬ ಹೇಳಿಕೆಯಿರುವ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.