ಭಾರತದ ಎಲೆಕ್ಟ್ರಾನಿಕ್ಸ್ ರಫ್ತು (Electronics Exports) ಅತ್ಯಂತ ವೇಗದಲ್ಲಿ ಹೆಚ್ಚಳ ಕಂಡಿದ್ದು, ನಾಲ್ಕು ವರ್ಷಗಳ ಹಿಂದೆ ಅತಿಹೆಚ್ಚು ರಫ್ತಾದ ವಿಭಾಗದಲ್ಲಿ ಏಳನೇ ಸ್ಥಾನದಲ್ಲಿದ್ದ ಎಲೆಕ್ಟ್ರಾನಿಕ್ಸ್ ಸೆಕ್ಟರ್ ಇದೀಗ ಮೂರನೇ ಸ್ಥಾನಕ್ಕೆ ಏರಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯ ಯಶೋಭೂಮಿ ಅಂತರರಾಷ್ಟ್ರೀಯ ಸಮಾವೇಶ ಕೇಂದ್ರದಲ್ಲಿ ಏಷ್ಯಾದ ಅತಿದೊಡ್ಡ ಡಿಜಿಟಲ್ ತಂತ್ರಜ್ಞಾನ ವೇದಿಕೆಯಾಗಿ ಹೊರಹೊಮ್ಮಿರುವ 'ಇಂಡಿಯಾ ಮೊಬೈಲ್ ಕಾಂಗ್ರೆಸ್ (IMC) 2025' ಅನ್ನು ಉದ್ಘಾಟಿಸಿದರು.