ಬಾಳೆಕುದ್ರು ಮಠದ ಹಿರಿಯ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ಅವರು (55) ಶುಕ್ರವಾರ, ಜುಲೈ 4 ರಂದು ನಿಧನರಾದರು. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಿಗಂದೂರಿನ ಹೊಳೆಬಾಗಿಲಿನಲ್ಲಿ ನದೀ ದಾಟುವ ಲಾಂಚ್‌ನ ಸ್ಟೀರಿಂಗ್ ಜಾಮ್ ಆದ ಪರಿಣಾಮ, ನೂರಾರು ಪ್ರಯಾಣಿಕರು ಹಾಗೂ ವಾಹನಗಳು ಕೆಲಕಾಲ ನದಿಯಲ್ಲಿ ಅತೀವ ಆತಂಕದ ವಾತಾವರಣವನ್ನು ಅನುಭವಿಸಿದ ಘಟನೆ ಗುರುವಾರ ಮಧ್ಯಾಹ್ನ ಸಂಭವಿಸಿದೆ.
ಕರ್ನಾಟಕ ಪೊಲೀಸರು ಶೀಘ್ರದಲ್ಲೇ ಹೊಸ ವಿನ್ಯಾಸದ ಕ್ಯಾಪ್ ಧರಿಸುವ ಸಾಧ್ಯತೆ ಇದೆ. ಸರ್ಕಾರವು ಪ್ರಸ್ತುತ ಬಳಸಲಾಗುತ್ತಿರುವ ಕ್ಯಾಪ್ ವಿನ್ಯಾಸವನ್ನು ಬದಲಾಯಿಸಲು ಚಿಂತನೆ ನಡೆಸಿದ್ದು, ಅದನ್ನು ಹೆಚ್ಚು ಆಧುನಿಕ, ಆಕರ್ಷಕ ಹಾಗೂ ಕಾರ್ಯಾತ್ಮಕವಾಗಿಸಲಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.