ಕಾರ್ಕಳ ತಾಲೂಕು ಯುವ ಬ್ರಾಹ್ಮಣ ಪರಿಷತ್ ಕಾರ್ಕಳ ಇದರ ವತಿಯಿಂದ ದಿನಾಂಕ 17.08.2025 ನೇ ಭಾನುವಾರ ಸಾಯಂಕಾಲ ಕಾರ್ಕಳ ಶ್ರೀ ಸೂರ್ಯನಾರಾಯಣ ಮಠದಲ್ಲಿ ನಡೆದಂತಹ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳಾದ ಕೃಷ್ಣ ವೇಷ ಸ್ಪರ್ಧೆ, ಭಕ್ತಿಗೀತೆ, ರಸಪ್ರಶ್ನೆ ಹಾಗೂ ಮೊಸರು ಕುಡಿಕೆ ಕಾರ್ಯಕ್ರಮಗಳು ಬಹಳ ಅದ್ದೂರಿಯಿಂದ ಸಮಾಜದ ಹಿರಿಯರ, ಗಣ್ಯರ ಮತ್ತು ಸಮಾಜ ಬಾಂಧವರ ಪಾಲ್ಗೊಳ್ಳುವಿಕೆಯಿಂದ ನೆರವೇರಿತು.
ಶ್ರೀ ಮದ್ ಮಹಾಸಂಸ್ಥಾನ ಸರಸ್ವತಿ ಪೀಠ ಕಟಪಾಡಿ ಪಡಕುತ್ಯಾರು ಇಲ್ಲಿ ಚಾತುರ್ಮಾಸ್ಯ ವೃತಾಚರಣೆ ನಿರತ ಪರಮಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳನ್ನು ಶಾಸಕ ವಿ. ಸುನಿಲ್ ಕುಮಾರ್ ಶನಿವಾರ ಭೇಟಿಯಾಗಿ ಆಶಿರ್ವಾದ ಪಡೆದರು.
ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ಹಾಗೂ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‌ನ ಸಹಯೋಗದಲ್ಲಿ ನಡೆಯುತ್ತಿರುವ ಮೌಲ್ಯಸುಧಾ ಮಾಲಿಕೆ-39ರಲ್ಲಿ 'ಸ್ವದೇಶಿ ಚಿಂತನೆ-ಯುವಕರಲ್ಲಿ ರಾಷ್ಟ್ರ ಭಕ್ತಿಯ ಬೆಳವಣಿಗೆ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸದಲ್ಲಿ ನಿತ್ಯಾನಂದ ಎಸ್.ಬಿ. ಮಾತನಾಡಿದರು.