ಇಂದಿಗೂ ಅನೇಕರಿಗೆ ಸಂಜೆಯ ಸಮಯದಲ್ಲಿ ನಿದ್ರಿಸಬಾರದು ಎಂಬುದಕ್ಕೆ ಸ್ಪಷ್ಟ ಕಾರಣ ತಿಳಿದಿಲ್ಲ. ಹಿರಿಯರು "ಸಂಜೆ ಲಕ್ಷ್ಮಿ ಬರುವ ಹೊತ್ತು" ಎಂದು ಹೇಳಿ ಸುಮ್ಮನಾಗಿಬಿಡುತ್ತಿದ್ದರು. ಆದರೆ, ಈ ನಂಬಿಕೆಯ ಹಿಂದೆ ಆಧ್ಯಾತ್ಮಿಕ ಹಾಗೂ ಪ್ರಾಯೋಗಿಕ ಕಾರಣಗಳೂ ಇವೆ.
ತೊಂಡೆಕಾಯಿ, ಹೃದಯಾಕಾರದ ಎಲೆಗಳುಳ್ಳ ಒಂದು ಸಣ್ಣದಾದ ಬಳ್ಳಿತರಕಾರಿ. ಇದನ್ನು ಭಾರತೀಯರು ಹಾಗೂ ಏಷ್ಯನ್ ರಾಷ್ಟ್ರಗಳು ದಿವ್ಯ ಔಷಧೀಯ ಉಪಯೋಗಗಳಿಗೆ ಬಳಸುತ್ತಿದ್ದಾರೆ. ಪೌಷ್ಟಿಕಾಂಶ, ಜೀರ್ಣಕ್ರಿಯೆ ಸುಧಾರಣೆ, ಮಧುಮೇಹ ನಿಯಂತ್ರಣ, ಕ್ಯಾನ್ಸರ್ ನಿರೋಧನೆ, ಅಲರ್ಜಿ ನಿವಾರಣೆ ಮತ್ತು ಸೋಂಕುಗಳಿಂದ ರಕ್ಷಣೆ—ಇವೆಲ್ಲವೂ ತೊಂಡೆಕಾಯಿಯ ಮಹತ್ವವನ್ನು ಹೆಚ್ಚಿಸುತ್ತವೆ.
ಈಗ ಹಲಸಿನ ಹಣ್ಣಿನ ಕಾಲ. ರುಚಿ ಮತ್ತು ಸುವಾಸನೆಯಿಂದ ಬಾಯಲ್ಲಿ ನೀರೂರಿಸುವ ಈ ಹಣ್ಣು ಆರೋಗ್ಯಕ್ಕೂ ಅಪಾರ ಲಾಭ ನೀಡುತ್ತದೆ. ಆದರೆ, ಬಹುಪಾಲು ಜನರು ಈ ಹಣ್ಣಿನ ಬೀಜಗಳನ್ನು ಉಪಯೋಗವಿಲ್ಲದ ಅಂಶವೆಂದು ಬಿಸಾಡುತ್ತಾರೆ. ಆದರೆ, ಆರೋಗ್ಯ ತಜ್ಞರ ಪ್ರಕಾರ, ಈ ಬೀಜಗಳಲ್ಲೂ ಅಮೂಲ್ಯ ಪೌಷ್ಟಿಕಾಂಶಗಳು ಅಡಗಿವೆ.