ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ದುರಂತದಲ್ಲಿ ಸಿದ್ದಾಪುರದ ಅಕ್ಷತಾ (27) ಮೃತಪಟ್ಟಿದ್ದಾರೆ. ಆರ್‌ಸಿಬಿ ಟೀಶರ್ಟ್‌ನಿಂದ ಪತ್ನಿಯ ಗುರುತನ್ನು ಗಂಡ ಆಶಯ್ ಪತ್ತೆ ಹಚ್ಚಿದರು.
ಆರ್‌ಸಿಬಿ ವಿಜಯೋತ್ಸವ ದುರಂತದ ಕುರಿತು ಪ್ರತಿಕ್ರಿಯಿಸಿರುವ ಆರ್‌ಸಿಬಿ ತಾರೆ ವಿರಾಟ್ ಕೊಹ್ಲಿ, ಇನ್‌ಸ್ಟಾಗ್ರಾಮ್‌ನಲ್ಲಿ ಶೋಕದ ಭಾವನೆ ಹಂಚಿಕೊಂಡಿದ್ದು, “ಈ ದುಃಖದ ಸುದ್ದಿ ಕೇಳಿ ನಾನು ಶಬ್ದವಿಲ್ಲದವನಾಗಿದ್ದೇನೆ. ಹೃದಯ ಒಡೆದುಹೋಗಿದೆ” ಎಂದು ಬರೆದುಕೊಂಡಿದ್ದಾರೆ.