ಮಾಧ್ಯಮಗಳು "ಗೃಹಲಕ್ಷ್ಮಿ ಹಣ ಮೂರು ತಿಂಗಳಿನಿಂದ ಬಂದಿಲ್ಲವೇಕೆ?" ಎಂದು ಸಚಿವ ಕೆ.ಜೆ. ಜಾರ್ಜ್ ಅವರನ್ನು ಪ್ರಶ್ನಿಸಿದಾಗ, "ತಿಂಗಳು ತಿಂಗಳು ಹಾಕಕ್ಕೆ ಅದೇನು ಸಂಬಳನಾ? ಹಾಕ್ತಾರೆ ಬಿಡಿ!" ಎಂದು ನಿರ್ಲಕ್ಷ್ಯ ಭರಿತವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಕುಂಭಮೇಳ ಅಧ್ಯಯನ ಪ್ರವಾಸಕ್ಕೆ ತನ್ನ ಶಾಸಕರಿಗೆ ಲಕ್ಷಾಂತರ ಹಣ ವ್ಯಯಿಸುವ ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಗ್ರಾಮ ಆಡಳಿತಾಧಿಕಾರಿಗಳ ಜ್ವಲಂತ ಸಮಸ್ಯೆಗಳು ಕಾಣದಾಯಿತೇ ಎಂದು ರೇಷ್ಮಾ ಉದಯ ಶೆಟ್ಟಿ ಪ್ರಶ್ನಿಸಿದ್ದಾರೆ.