ರಾಜಧಾನಿಯ ವೈಟ್‌ಫೀಲ್ಡ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ಆಘಾತಕಾರಿ ಘಟನೆ ನಡೆದಿದ್ದು, ಸಾಫ್ಟ್‌ವೇರ್ ಎಂಜಿನಿಯರ್ ಮಗಳು ಮತ್ತು ಅವರ ತಾಯಿ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಇತರ ಪ್ರಭಾವಿ ನಾಯಕರ ಹೆಸರುಗಳನ್ನು ದುರ್ಬಳಕೆ ಮಾಡಿಕೊಂಡು, ಶ್ರೀಮಂತ ಕುಟುಂಬದ ಸುಮಾರು 20 ಮಹಿಳೆಯರಿಗೆ 30 ಕೋಟಿ ರೂಪಾಯಿಗೂ ಹೆಚ್ಚು ವಂಚನೆ ಮಾಡಿರುವ ಪ್ರಕರಣ ಬಸವೇಶ್ವರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಕಾಂಗ್ರೆಸ್‌ನ "ಒನ್ ಟು ಒನ್" ಸಭೆಗಳು ಆಡಳಿತದ ಕಾರ್ಯವೈಖರಿ ಮತ್ತು ಸಚಿವರ ವರ್ತನೆಗಳ ಬಗ್ಗೆ ಅಸಮಾಧಾನ ಹೊರಹಾಕುವ ವೇದಿಕೆಯಾಗಿದ್ದರೆ, ಬುಧವಾರ ಈ ಸಭೆ ಶಾಸಕರ ವಿರುದ್ಧವೇ ಅವರ ಕುಟುಂಬದ ಸದಸ್ಯರು ದೂರು ಸಲ್ಲಿಸಲು ಅವಕಾಶ ಮಾಡಿಕೊಟ್ಟಿತು.
ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಶನಿವಾರ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು 500 ಕ್ಕೂ ಅಧಿಕ ಹಿಂದು ಶ್ರದ್ಧಾಳುಗಳಿಗೆ ಸಾಮೂಹಿಕ ಕೃಷ್ಣ ಮಂತ್ರೋಪದೇಶ ನೀಡಿ ಅನುಗ್ರಹಿಸಿದರು.