ಧರ್ಮಸ್ಥಳದ ಅರಣ್ಯದಲ್ಲಿ ಶವಗಳನ್ನು ಹೂತು ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ, ಅನಾಮಿಕ ವ್ಯಕ್ತಿ ಗುರುತಿಸಿದ ಪಾಯಿಂಟ್ ನಂಬರ್ 1ರಲ್ಲಿ ದೊರಕಿದ ಡೆಬಿಟ್ ಮತ್ತು ಪಾನ್ ಕಾರ್ಡ್‌ಗಳ ರಹಸ್ಯವನ್ನು ಎಸ್‌ಐಟಿ ಅಧಿಕಾರಿಗಳು ಭೇದಿಸಿದ್ದಾರೆ.
ಅನಾಮಿಕ ವ್ಯಕ್ತಿ ಗುರುತಿಸಿದ ನಾಲ್ಕನೇ ಸ್ಥಳದಲ್ಲಿನ ಅಗೆಯುವ ಕಾರ್ಯಾಚರಣೆಯನ್ನು ವೀಕ್ಷಿಸಲು ಎಸ್‌ಐಟಿ (ವಿಶೇಷ ತನಿಖಾ ದಳ) ಮುಖ್ಯಸ್ಥ ಡಾ. ಪ್ರಣಬ್ ಮೊಹಾಂತಿ ಅವರು ತನಿಖಾಧಿಕಾರಿಗಳಾದ ಅನುಚೇತ್ ಮತ್ತು ಎಸ್‌ಪಿ ಸಿ.ಎ. ಸೈಮನ್ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಧರ್ಮಸ್ಥಳದ ಅರಣ್ಯ ಪ್ರದೇಶದಲ್ಲಿ ಮೃತದೇಹ ಹೂತು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಅನಾಮಿಕ ಗುರುತಿಸಿದ 13 ಸ್ಥಳಗಳ ಪೈಕಿ 3ನೇ ಸ್ಥಳದಲ್ಲಿಯೂ ಯಾವುದೇ ಕಳೇಬರ ಪತ್ತೆಯಾಗದಿರುವುದು ಎಸ್‌ಐಟಿ (Special Investigation Team) ಅಧಿಕಾರಿಗಳಿಗೆ ತೀವ್ರ ತಲೆನೋವಾಗಿ ಪರಿಣಮಿಸಿದೆ.
ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಬಳಿ ಮೃತದೇಹ ಹೂತು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಉತ್ಖನನ ಕಾರ್ಯದಲ್ಲಿ,ಮೊದಲು ಗುರುತಿಸಿದ ಸ್ಥಳದಲ್ಲಿ ಮಿನಿ ಹಿಟಾಚಿ ಯಂತ್ರವನ್ನು ಬಳಸಿದರೂ ಇದುವರೆಗೆ ಕಳೇಬರ ಪತ್ತೆಯಾಗಿಲ್ಲ.