
ದಿನಾಂಕ 05.01.2025ರಂದು ಕರ್ನಾಟಕ ಆಮ್ ರೆಸ್ಲಿಂಗ್ ಅಸೋಸಿಯೇಷನ್ ಇವರ ವತಿಯಿಂದ ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಪಂಜ ಕುಸ್ತಿ ಪಂದ್ಯಾಟದ ಸೀನಿಯರ್ ವಿಭಾಗದಲ್ಲಿ ಸುಜಿತ್ ನಾಯಕ್, ಸೂರಜ್ ಆಚಾರ್ಯ, ಪ್ರಸಾದ್ ಪೂಜಾರಿ ಹಾಗೂ ಜೂನಿಯರ್ ವಿಭಾಗದಲ್ಲಿ ಹಾಗೂ ಯೂತ್ ವಿಭಾಗದಲ್ಲಿ ಆದಿತ್ಯ ಕೋಟ್ಯಾನ್. ಸಾತ್ವಿಕ್, ಸ್ವಸ್ತಿಕ್, ಪ್ರಜ್ವಿತ್ ಜಿ., ಭರತ್, ಕಿರಣ್, ಮೋಹಿತ್ ಶೆಟ್ಟಿ ಇವರು ಹಲವು ಪ್ರಶಸ್ತಿಗಳನ್ನು ಗೆದ್ದು ಉತ್ತರಾಖಂಡ್ ನಲ್ಲಿ ನಡೆಯುವ ರಾಷ್ಟ್ರೀಯ ಪಂಜ ಕುಸ್ತಿ ಪಂದ್ಯಾಟದಲ್ಲಿ ಸ್ಪರ್ಧಿಸಲು ಆಯ್ಕೆಯಾಗಿರುತ್ತಾರೆ. ಇವರು ಕಾರ್ಕಳ ಜೋಡುರಸ್ತೆಯ ಫ್ರೆಂಡ್ಸ್ ಪವರ್ ಜಿಮ್ ನ ಮಹಮ್ಮದ್ ಅಲಿಯವರಿಂದ ತರಬೇತಿ ಪಡೆದಿರುತ್ತಾರೆ. ಫ್ರೆಂಡ್ಸ್ ಪವರ್ ಜಿಮ್ ನ ಪಾಲುದಾರರಾದ ಯೋಗೀಶ್ ಸಾಲಿಯಾನ್ ರವರು ಶುಭ ಹಾರೈಸಿರುತ್ತಾರೆ.