ಜನವರಿ 4 ರಂದು ಬೈಂದೂರಿನಲ್ಲಿ ನಡೆದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಅಜೆಕಾರು ಚರ್ಚ್ ಆಂಗ್ಲ ಮಾಧ್ಯಮ ಶಾಲೆಯ 4ನೇ ತರಗತಿಯ ವಿದ್ಯಾರ್ಥಿ ಗಹನವ್ ಬೆಳಿರಾಯ ಉತ್ತಮ ಪ್ರದರ್ಶನ ನೀಡಿ 10 ವರ್ಷದೊಳಗಿನ ಕುಮಿಟೇ ವಿಭಾಗದಲ್ಲಿ ಬೆಳ್ಳಿ ಪದಕ ಹಾಗೂ ಕಟಾ ವಿಭಾಗದಲ್ಲಿ ಕಂಚಿನ ಪದಕ ಪಡೆದಿದ್ದಾನೆ.
ಇವರು ಬೆಳ್ಮಣ್ ಸತೀಶ್ ಸರ್ ರವರಲ್ಲಿ ತರಬೇತಿ ಪಡೆದಿದ್ದು, ಅಜೆಕಾರು ಪ್ರಜ್ಞಾ ಮತ್ತು ಶ್ರೀಪತಿ ಬೆಳಿರಾಯ ರವರ ಪುತ್ರರಾಗಿರುತ್ತಾರೆ.
ಅರಳುತ್ತಿರುವ ಯುವ ಪ್ರತಿಭೆಗಳ ಪರಿಕಲ್ಪನೆಯನ್ನು ಬೆಂಬಲಿಸುವಲ್ಲಿ ಪೋಷಕರು ಮತ್ತು ತರಬೇತುದಾರರ ಪಾತ್ರ ಮಹತ್ವದ್ದಾಗಿದೆ ಎಂಬುದನ್ನು ಗಹನವ್ ಅವರ ಸಾಧನೆ ಸಾಬೀತುಪಡಿಸಿದೆ.