ಕಾರ್ಕಳ : ಈಜು ಮನುಷ್ಯನ ಏಕಾಗ್ರತೆ ಮತ್ತು ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುತದೆ ಕಾರ್ಕಳದಲ್ಲಿ ಇನ್ನಷ್ಟು ಈಜು ಪಟುಗಳಿಗೆ ಈ ಸಂಸ್ಥೆ ಪ್ರೇರಣೆ ಆಗಲಿ – ಶಾಸಕರು ಸುನಿಲ್ ಕುಮಾರ್
ಕಾರ್ಕಳ ತಾಲೂಕು ಕ್ರೀಡಾಂಗಣದ ಬಳಿ ಇರುವ ಈಜುಕೊಳದಲ್ಲಿ ಅಕ್ವಾ ಸೆಂಟರ್ ಕಾರ್ಕಳ ಇವರ ವತಿಯಿಂದ ನಡೆದ ಅಕ್ವಾ ಅಮಿಗೋಸ್ ಸ್ವಿಮ್ಮಿಂಗ್ ಫೆಸ್ಟ್ -2025 ಕಾರ್ಯಕ್ರಮದ ಉದ್ಘಾಟನೆಯನ್ನು ಕಾರ್ಕಳದ ಶಾಸಕರಾಗಿರುವ ವಿ. ಸುನಿಲ್ ಕುಮಾರ್ ಅವರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು. ಕಾರ್ಕಳದ ಮಣ್ಣಿಗೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಬೇರೆ ಬೇರೆ ತಾಲೂಕಿನ ಮಕ್ಕಳನ್ನು ಕರೆಸಿಕೊಂಡ ಸಂಸ್ಥೆಯ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ವೇದಿಕೆಯಲ್ಲಿ ಅಕ್ವಾ ಸೆಂಟರ್ ಕಾರ್ಕಳ ದಿಂದ ತರಬೇತು ಪಡೆದು ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅಂತರಾಷ್ಟ್ರೀಯ ಈಜು ಕ್ರೀಡಾಪಟು ಶ್ರೀಮತಿ ವಿದ್ಯಾ ಪೈ ಯವರು ವಿದ್ಯಾರ್ಥಿಗಳ ಸರ್ವತೋಮುಖ ಏಳಿಗೆಗೆ ಪೋಷಕರ ಸಹಕಾರ ಇದ್ದಲ್ಲಿ ಉನ್ನತ ಮಟ್ಟ ಏರಲು ಸಾಧ್ಯವೆಂದು ಶುಭನುಡಿದರು.
38 ವರ್ಷಗಳಿಂದ ರಾಮಸಮುದ್ರದಲ್ಲಿ ಉಚಿತವಾಗಿ ಈಜು ತರಬೇತಿಯನ್ನು ಹೇಳಿಕೊಡುತ್ತಿರುವಂತಹ ವಿಠ್ಠಲ್ ಅವರು ಮತ್ತು ಸರಕಾರಿ ಶಾಲಾ ಶಿಕ್ಷಕಿಯಾಗಿದ್ದುಕೊಂಡು ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿರುವ ಶ್ರೀಮತಿ ವಿಜಯಲಕ್ಷ್ಮಿ,
ವೀ ಒನ್ ಅಕ್ವಾ ಸೆಂಟರ್ ಡೈರೆಕ್ಟರ್ ಆಗಿರುವ ಶ್ರೀಮತಿ ರೂಪ ಮತ್ತು ನವೀನ್ ಹಾಗೂ ಪುರಸಭಾ ಅಧ್ಯಕ್ಷರಾದ ಯೋಗೀಶ್ ದೇವಾಡಿಗ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ 250ಕ್ಕೂ ಹೆಚ್ಚು ವಿದ್ಯಾರ್ಥಿ, ಮತ್ತು ಪುರುಷರು, ಮಹಿಳೆಯರು ವಿವಿಧ ವಿನ್ಯಾಸ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು ಪ್ರಮಾಣ ಪತ್ರ ಮತ್ತು ಪದಕಗಳನ್ನು ಪಡೆದರು. ಅಮೋಘವಾದಂತಹ ಸ್ಪರ್ಧೆಯನ್ನು ಏರ್ಪಡಿಸಿದಂತಹ ಕೀರ್ತಿ “ವೀ ಒನ್ ಅಕ್ವಾ ಕಾರ್ಕಳ ಸೆಂಟರ್” ಪೋಷಕರಿಗೆ ಸಲ್ಲುತ್ತದೆ ಕಾರ್ಯಕ್ರಮದ ಪ್ರಾರ್ಥನೆ ಕು.ಶಾರ್ವರಿ, ನಿರೂಪಣೆ ಶ್ರೀಮತಿ ರಮಿತಾ ಶೈಲೇಂದ್ರ ಅವರು ನೆರವೇರಿಸಿದರು.