ಕಾಲ್ಬೆರಳುಗಳ ನಡುವೆ ಉಂಟಾಗುವ ತುರಿಕೆ ಮತ್ತು ಅಲರ್ಜಿ ನಿವಾರಣೆಗೆ ಪ್ರಯೋಜನಕಾರಿ ಮನೆಮದ್ದುಗಳು !

Date:

spot_img

ಮಳೆಗಾಲ ಆರಂಭವಾದರೆ ಅಲರ್ಜಿ, ತುರಿಕೆ ಮತ್ತು ಫಂಗಲ್ ಸೋಂಕು ಸಾಮಾನ್ಯವಾಗುತ್ತದೆ. ವಿಶೇಷವಾಗಿ ಕಾಲ್ಬೆರಳುಗಳ ಮಧ್ಯೆ ಉಂಟಾಗುವ ತುರಿಕೆ ಜನರಿಗೆ ತೀವ್ರ ಕಿರಿಕಿರಿಯನ್ನು ಉಂಟುಮಾಡುತ್ತದೆ. ಧೀರ್ಘ ಕಾಲದ ಬೆವರುವಿಕೆ , ಕೊಳಚೆ ನೀರಿನ ಸಂಪರ್ಕ ಮತ್ತು ಸ್ವಚ್ಚತೆಯ ಕೊರತೆಯಿಂದ ಈ ಸಮಸ್ಯೆಗಳು ಉಂಟಾಗುತ್ತವೆ. ಆದರೆ ಇವುಗಳಿಗೆ ಮನೆಯಲ್ಲೇ ಇರುವ ಸಾಮಾನ್ಯ ವಸ್ತುಗಳಿಂದ ಪರಿಹಾರ ಪಡೆಯಬಹುದು.

ಮನೆಮದ್ದುಗಳ ಪಟ್ಟಿ:

ಅಡಿಗೆ ಸೋಡಾ (Baking Soda)
ಅಡಿಗೆ ಸೋಡಾ ತುರಿಕೆಗೆ ಉತ್ತಮ ಮನೆಮದ್ದು. ಇದು ತಂಪು ತಕ್ಷಣ ನೀಡುತ್ತದೆ ಮತ್ತು ಸೋಂಕು ಹರಡುವುದನ್ನು ತಡೆಯುತ್ತದೆ.
➡ 2 ಕಪ್ ಬಿಸಿ ನೀರಿಗೆ 2 ಚಮಚ ಅಡಿಗೆ ಸೋಡಾ ಹಾಕಿ ಕಾಲನ್ನು 15-20 ನಿಮಿಷ ನೆನೆಸಿರಿ.

ಬೇವಿನ ಎಲೆಗಳು (Neem Leaves)
ಬೇವಿನ ಎಲೆಗಳಲ್ಲಿ ಆಂಟಿಫಂಗಲ್ ಮತ್ತು ಬ್ಯಾಕ್ಟೀರಿಯಾ ನಾಶಕ ಗುಣಗಳಿವೆ.
➡ ಬೇವಿನ ಎಲೆಗಳನ್ನು ಕುದಿಸಿ, ತಣ್ಣಗಾದ ನೀರನ್ನು ಅಲರ್ಜಿ ಪ್ರದೇಶಕ್ಕೆ ಹಚ್ಚಿರಿ.

ಟೀ ಟ್ರೀ ಎಣ್ಣೆ (Tea Tree Oil)
ಟೀ ಟ್ರೀ ಎಣ್ಣೆ ಚರ್ಮದ ಸೋಂಕು ನಿವಾರಣೆಗೆ ಉತ್ತಮ.
➡ 5 ಹನಿ ಟೀ ಟ್ರೀ ಎಣ್ಣೆಯನ್ನು ತೆಂಗಿನ ಎಣ್ಣೆ ಅಥವಾ ಆಲಿವ್ ಎಣ್ಣೆಯಲ್ಲಿ ಬೆರೆಸಿ ದಿನಕ್ಕೆ ಎರಡು ಬಾರಿ ಹಚ್ಚಿರಿ.

ಆಪಲ್ ಸೈಡರ್ ವಿನೆಗರ್ (Apple Cider Vinegar)
ಇದು ಫಂಗಲ್ ಸೋಂಕು ನಿವಾರಣೆಗೆ ಒಳ್ಳೆಯದು.
➡ ಸಮ ಪ್ರಮಾಣದ ಆಪಲ್ ಸೈಡರ್ ವಿನೆಗರ್ ಮತ್ತು ನೀರಿನಲ್ಲಿ ಕಾಲುಗಳನ್ನು 15-20 ನಿಮಿಷ ನೆನೆಸಿ.

ತೆಂಗಿನ ಎಣ್ಣೆ (Coconut Oil)
ತೆಂಗಿನ ಎಣ್ಣೆ ತುರಿಕೆ ಮತ್ತು ಒಣತನೆಯನ್ನು ನಿವಾರಿಸುತ್ತದೆ.
➡ ಬೆಚ್ಚಗಿನ ತೆಂಗಿನ ಎಣ್ಣೆಯನ್ನು ತುರಿಕೆ ಇರುವ ಭಾಗಕ್ಕೆ ಹಚ್ಚಿರಿ.

ಮುಖ್ಯ ಸಲಹೆ:
ಚರ್ಮವು ಒದ್ದೆಯಾಗಿ ಇರುವುದನ್ನು ತಪ್ಪಿಸಿ, ಪದೇಪದೇ ತೊಳೆಯುವುದು ಮತ್ತು ಒಣಗಿಸುವುದು ಮುಖ್ಯ. ಕಾಲುಗಳಿಗೆ ಗಾಳಿಯು ಸಿಗುವಂತಹ ಶೂಗಳನ್ನು ಧರಿಸಿ. ಅಗತ್ಯವಿದ್ದರೆ ವೈದ್ಯಕೀಯ ಸಲಹೆ ಪಡೆಯಿರಿ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

‘ರಾಮಾಯಣ’ ಟ್ರೇಲರ್ ಬಿಡುಗಡೆ ಮುಂದೂಡಿಕೆ: ಜಾಗತಿಕ ಒಪ್ಪಂದದ ಸತ್ಯ ಇಲ್ಲಿದೆ

'ರಾಮಾಯಣ' ಟ್ರೇಲರ್ ಬಿಡುಗಡೆ ದಿಢೀರ್ ಮುಂದೂಡಿಕೆ: ಸೋನಿ ಪಿಕ್ಚರ್ಸ್ ಜೊತೆ ಬೃಹತ್...

ಕಾರ್ಕಳಕ್ಕೆ 5.00 ಕೋಟಿ ರೂ. ಅನುದಾನ: 2 ಪ್ರಮುಖ ಸೇತುವೆ ನಿರ್ಮಾಣ!

ಕೂಡ್ಲು ಬೀರನ್‌ಬೈಲು ಹಾಗೂ ಹೆರ್ಮುಂಡೆ ಸೇತುವೆಗೆ ಮುಕ್ತಿ: 5.00 ಕೋಟಿ ರೂ....

ಪ್ರಶ್ನೆ ಪತ್ರಿಕೆ ಸೋರಿಕೆ: ಪ್ರಧಾನಿ ಮೋದಿ ಮೊದಲೇ ಮಾತನಾಡಬೇಕಿತ್ತು ಎಂದ ಡಿ.ಕೆ. ಶಿವಕುಮಾರ್!

100 ಕ್ಕೂ ಹೆಚ್ಚು ಪರೀಕ್ಷೆಗಳ ಪತ್ರಿಕೆ ಸೋರಿಕೆ: ಬಿಜೆಪಿಯ ವೈಫಲ್ಯ ಖಂಡಿಸಿ...

ಪ್ರಧಾನಿ ಮೋದಿ ಮಧ್ಯರಾತ್ರಿ ವಿಡಿಯೋಗೆ CJP ತೀವ್ರ ತಿರುಗೇಟು: ಶಿಕ್ಷಣ ಸಚಿವರ ವಜಾಕ್ಕೆ ಪಟ್ಟು!

ಶೀಘ್ರಗತಿ ನ್ಯಾಯಾಲಯದ ಭರವಸೆ ನೀಡಿದ ಪ್ರಧಾನಿ: ಸಚಿವ ಧರ್ಮೇಂದ್ರ ಪ್ರಧಾನ್ ವಜಾಗೊಳಿಸಲು...