
ಶಿವನಿಗೆ ಅತ್ಯಂತ ಪ್ರಿಯವಾದ ಬಿಲ್ವಪತ್ರೆ ಕೇವಲ ಪೂಜೆಗೆ ಮಾತ್ರವಲ್ಲ, ಔಷಧೀಯ ಗುಣಗಳಿಂದಲೂ ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ. ಆಯುರ್ವೇದದಲ್ಲಿ ಇದರ ಮಹತ್ವವನ್ನು ಒತ್ತಿಹೇಳಲಾಗಿದ್ದು, ಬಿಲ್ವಪತ್ರೆಯಿಂದ ತಯಾರಿಸಿದ ತಂಬುಳಿ ಮತ್ತು ಕಷಾಯ ಅನೇಕ ರೋಗಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹಾಗೆಯೇ, ಪರಿಸರದಲ್ಲಿ ಸುಲಭವಾಗಿ ದೊರೆಯುವ ಎಲೆ ಉರುಗ ಸೊಪ್ಪಿನ ತಂಬುಳಿಯೂ ಸಹ ಅಪಾರ ಔಷಧೀಯ ಗುಣಗಳನ್ನು ಹೊಂದಿದೆ.
ಬಿಲ್ವಪತ್ರೆ ಮತ್ತು ಎಲೆ ಉರುಗ ಸೊಪ್ಪಿನ ತಂಬುಳಿ ಮಾಡುವ ವಿಧಾನ
- ಬಿಲ್ವಪತ್ರೆ ಅಥವಾ ಎಲೆ ಉರುಗ ಸೊಪ್ಪನ್ನು ಚೆನ್ನಾಗಿ ತೊಳೆಯಿರಿ.
- ಬಾಣಲೆಯಲ್ಲಿ ತುಪ್ಪ ಹಾಕಿ ಕಾಳು ಮೆಣಸು, ಜೀರಿಗೆ ಜೊತೆಗೆ ಸೊಪ್ಪನ್ನು ಹಾಕಿ 5 ನಿಮಿಷ ಹುರಿಯಿರಿ.
- ನಂತರ ಕಾಯಿತುರಿ ಮತ್ತು ಮಜ್ಜಿಗೆಯೊಂದಿಗೆ ರುಬ್ಬಿಕೊಳ್ಳಿ.
- ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿದರೆ ತಂಬುಳಿ ಸಿದ್ಧ. ಇದನ್ನು ಊಟದ ಜೊತೆಗೆ ಅಥವಾ ಪ್ರತ್ಯೇಕವಾಗಿ ಸೇವಿಸಬಹುದು.
ಬಿಲ್ವಪತ್ರೆ ಕಷಾಯ ಮಾಡುವ ವಿಧಾನ
ಕಷಾಯ ಮಾಡಲು ಜೀರಿಗೆ, ಕೊತ್ತಂಬರಿ, ಮೆಂತೆ ಮತ್ತು ಕಾಳು ಮೆಣಸು ಜೊತೆಗೆ ಒಂದು ಹಿಡಿಯಷ್ಟು ಬಿಲ್ವಪತ್ರೆ ಹಾಕಿ ಚೆನ್ನಾಗಿ ಕುದಿಸಬೇಕು. ಈ ಕಷಾಯವನ್ನು ಬೆಳಗ್ಗೆ ಸೇವಿಸುವುದು ಉತ್ತಮ.
ಪ್ರಯೋಜನಗಳು
ಬಿಲ್ವಪತ್ರೆ ಪ್ರಯೋಜನಗಳು:
- ಮಧುಮೇಹ ನಿಯಂತ್ರಣ: ಬಿಲ್ವಪತ್ರೆಯಲ್ಲಿರುವ ಪೆಂಟೆನೆಸ್ ಮತ್ತು ಮಾರ್ಮೆಲೋಸಿನ್ ಅಂಶಗಳು ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.
- ಜೀರ್ಣಕ್ರಿಯೆಗೆ ಸಹಕಾರಿ: ಅಜೀರ್ಣ, ಗ್ಯಾಸ್ಟ್ರಿಕ್, ಮಲಬದ್ಧತೆ ಮತ್ತು ಅತಿಸಾರದಂತಹ ಸಮಸ್ಯೆಗಳಿಗೆ ತಂಬುಳಿ ಬಹಳ ಪರಿಣಾಮಕಾರಿ.
- ಪೌಷ್ಟಿಕಾಂಶ ಭರಿತ: ಪೊಟ್ಯಾಶಿಯಮ್, ಕಬ್ಬಿಣ ಮತ್ತು ಮೆಗ್ನೀಶಿಯಂನಂತಹ ಖನಿಜಾಂಶಗಳು ದೇಹದ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತವೆ.
- ರೋಗ ನಿರೋಧಕ ಶಕ್ತಿ: ಜ್ವರ ಮತ್ತು ಮೂತ್ರ ಸಂಬಂಧಿತ ಕಾಯಿಲೆಗಳಿಗೂ ಕಷಾಯ ಒಳ್ಳೆಯದು.
ಎಲೆ ಉರುಗ ಸೊಪ್ಪಿನ ಪ್ರಯೋಜನಗಳು:
- ವಿಷ ನಿವಾರಕ: ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಕಾರಿ.
- ನೆಗಡಿ, ಕೆಮ್ಮು ನಿವಾರಣೆ: ಶೀತ, ಕೆಮ್ಮು ಮತ್ತು ನೆಗಡಿಯಂತಹ ಸಾಮಾನ್ಯ ಕಾಯಿಲೆಗಳಿಗೆ ಉತ್ತಮ ಪರಿಹಾರ ನೀಡುತ್ತದೆ.
- ಜೀರ್ಣಕ್ರಿಯೆ ಸುಧಾರಣೆ: ಊಟಕ್ಕೂ ಮೊದಲು ಇದರ ತಂಬುಳಿ ಸೇವಿಸಿದರೆ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ.