
ಮನೆಯಂಗಳದಲ್ಲಿ ಮನಸೂರೆಗೊಳ್ಳುವಂತೆ ಅರಳುವ ಪುಟ್ಟ ಗಿಡವಾದ ನಿತ್ಯ ಪುಷ್ಪ ಅಥವಾ ಸದಾ ಪುಷ್ಪ ಕೇವಲ ಪೂಜೆಗೆ ಮಾತ್ರವಲ್ಲ, ಆರೋಗ್ಯ ವೃದ್ಧಿಗೂ ಅಷ್ಟೇ ಮಹತ್ವ ಪಡೆದಿದೆ. ತಿಳಿ ಗುಲಾಬಿ ಮತ್ತು ಬಿಳಿಯ ಬಣ್ಣದಲ್ಲಿ ಅರಳುವ ಈ ಹೂವು (ಇಂಗ್ಲಿಷ್‌ನಲ್ಲಿ ‘ಮದಗಾಸ್ಕರ್ ಪೆರಿವಿಂಕಲ್’ ಎಂದೂ, ಹಿಂದಿಯಲ್ಲಿ ‘ಸದಾಬಹಾರ್’ ಎಂದೂ ಕರೆಯಲ್ಪಡುತ್ತದೆ) ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಆಯುರ್ವೇದದಲ್ಲಿಯೂ ಉಲ್ಲೇಖಿಸಲ್ಪಟ್ಟಿರುವ ಈ ಸಸ್ಯದ ಪ್ರಮುಖ ಆರೋಗ್ಯಕರ ಪ್ರಯೋಜನಗಳು ಇಲ್ಲಿವೆ:

ನಿತ್ಯ ಪುಷ್ಪದ ಆರೋಗ್ಯಕರ ಪ್ರಯೋಜನಗಳು
- ಕ್ಯಾನ್ಸರ್‌ಗೆ ತಡೆ ನೀಡುತ್ತದೆ: ನಿತ್ಯ ಪುಷ್ಪದ ಬೇರನ್ನು ಕ್ಯಾನ್ಸರ್ ಜೀವಕೋಶಗಳ ವಿರುದ್ಧ ಹೋರಾಡಲು ಬಳಸಲಾಗುತ್ತದೆ. ಇದರಲ್ಲಿನ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಕ್ಯಾನ್ಸರ್ ಜೀವಕೋಶಗಳ ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡುತ್ತವೆ.
- ಮಧುಮೇಹ ನಿಯಂತ್ರಣ: ರಕ್ತದಲ್ಲಿನ ಸಕ್ಕರೆಯ ಸ್ಪೈಕ್ ಅನ್ನು ನಿಯಂತ್ರಿಸಲು ಆಯುರ್ವೇದವು ನಿತ್ಯ ಪುಷ್ಪವನ್ನು ಶಿಫಾರಸು ಮಾಡುತ್ತದೆ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಹೂವಿನ ಎಸಳಿನ ಟೀಯನ್ನು ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣಕ್ಕೆ ಬರುತ್ತದೆ.
- ಖಿನ್ನತೆ ಮತ್ತು ಆತಂಕ ನಿವಾರಣೆ: ನಿತ್ಯ ಪುಷ್ಪದ ಬಳಕೆಯಿಂದ ಖಿನ್ನತೆ, ಆತಂಕದಂತಹ ಮಾನಸಿಕ ಅನಾರೋಗ್ಯದ ಸಮಸ್ಯೆಗಳು ನಿವಾರಣೆಯಾಗುತ್ತವೆ. ಮಾನಸಿಕವಾಗಿ ದಣಿದಿದ್ದರೆ ನಿತ್ಯ ಪುಷ್ಪ ಹೂವಿನ ಚಹಾವನ್ನು ಸೇವಿಸಿ ಅಥವಾ ಹೂವಿನ ರಸವನ್ನು ಪ್ರತಿದಿನ ಒಂದೆರಡು ಚಮಚ ಸೇವಿಸುವುದರಿಂದ ಮಾನಸಿಕವಾಗಿ ಸದೃಢರಾಗಬಹುದು.
- ಅಧಿಕ ರಕ್ತದೊತ್ತಡಕ್ಕೆ ಪರಿಹಾರ: ಬದಲಾದ ಜೀವನಶೈಲಿಯಿಂದ ಕಾಣಿಸಿಕೊಳ್ಳುವ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ನಿತ್ಯ ಪುಷ್ಪ ಗಿಡವು ಸಹಾಯ ಮಾಡುತ್ತದೆ. ಪ್ರತಿದಿನ ಗಿಡದ ಎಲೆಗಳ ಪುಡಿಯನ್ನು ಚಿಟಿಕೆಯಷ್ಟು ಸೇವನೆ ಮಾಡುವುದರಿಂದ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ.
- ಋತು ಚಕ್ರದ ಸಮಸ್ಯೆಗಳ ಪರಿಹಾರ: ನಿತ್ಯ ಪುಷ್ಪ ಗಿಡದ ಎಲೆಗಳನ್ನು ನೀರಿನಲ್ಲಿ ಕುದಿಸಿ ಸೇವಿಸಿದರೆ ಋತು ಚಕ್ರದ ಸಮಸ್ಯೆಗಳೂ ನಿವಾರಣೆಯಾಗುತ್ತವೆ.
- ಚರ್ಮದ ಕಾಂತಿ ಹೆಚ್ಚಳ: ಸ್ಕಿನ್ ಟ್ಯಾನಿಂಗ್, ಕಪ್ಪು ಕಲೆಗಳು, ಮೊಡವೆಯಂತಹ ಚರ್ಮದ ಸಮಸ್ಯೆಗಳಿಗೆ ನಿತ್ಯ ಪುಷ್ಪ ಪರಿಹಾರ ನೀಡುತ್ತದೆ. ಗಿಡದ ಎಲೆಗಳನ್ನು ಒಣಗಿಸಿ ಪುಡಿ ಮಾಡಿ, ನೀರು ಸೇರಿಸಿ ಮುಖಕ್ಕೆ ಹಚ್ಚುತ್ತಾ ಬಂದರೆ ಚರ್ಮದ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿ, ಮುಖದ ಕಾಂತಿ ಕೂಡ ಹೆಚ್ಚಾಗುತ್ತದೆ.



































