ಮರಗೆಣಸು ಸಿಕ್ಕರೆ ಮಿಸ್ ಮಾಡಬೇಡಿ : ಆರೋಗ್ಯದ ಗುಟ್ಟು ಅಡಗಿದೆ ಈ ಗೆಣಸಿನಲ್ಲಿ

Date:

spot_img

ಮಾರುಕಟ್ಟೆಗಳಲ್ಲಿ ಮರ ಗೆಣಸು ಕಾಣುವುದು ವಿರಳವಾದರೂ, ಸಿಕ್ಕರೆ ತಪ್ಪದೇ ಸೇವಿಸಿ. ಒಂದು ಕಾಲದಲ್ಲಿ ಜನರು ಕಾಡಿನಲ್ಲಿ ಗಡ್ಡೆ ಗೆಣಸುಗಳನ್ನು ತಿಂದು ಯಾವುದೇ ರೋಗ-ರುಜಿನಗಳಿಲ್ಲದೆ ನೆಮ್ಮದಿಯ ಜೀವನ ನಡೆಸುತ್ತಿದ್ದರು. ಆದರೆ ಇಂದಿನ ಆಧುನಿಕ ಜೀವನಶೈಲಿಯಿಂದಾಗಿ ಹಲವಾರು ರೋಗಗಳು ಚಿಕ್ಕ ವಯಸ್ಸಿಗೆ ಮನುಷ್ಯನ ಆಯಸ್ಸನ್ನು ಕಡಿಮೆ ಮಾಡುತ್ತಿವೆ. ಈ ಸಮಸ್ಯೆಗಳಿಂದ ಹೊರಬರಲು ಹಿರಿಯರು ಅನುಸರಿಸುತ್ತಿದ್ದ ಆಹಾರ ಪದ್ಧತಿಗಳನ್ನು ಅನುಸರಿಸುವುದು ಅನಿವಾರ್ಯವಾಗಿದೆ. ಅಂತಹ ಆಹಾರಗಳಲ್ಲಿ ಮರಗೆಣಸು ಕೂಡ ಒಂದಾಗಿದೆ.

Bulk of fresh cassava harvested in farmland.

ಮರಗೆಣಸಿನ ಪ್ರಮುಖ ಆರೋಗ್ಯ ಪ್ರಯೋಜನಗಳು

  • ಮೈಗ್ರೇನ್ ತಲೆನೋವಿಗೆ ಪರಿಹಾರ: ಮೈಗ್ರೇನ್ ತಲೆನೋವಿನಿಂದ ಬಳಲುವವರು ಮರಗೆಣಸನ್ನು ಬೇಯಿಸಿ ಸೇವಿಸಿದರೆ ಅಥವಾ ಗೆಣಸಿನ ಎಲೆಗಳು/ಬೇರುಗಳನ್ನು ಶುದ್ಧ ಮಾಡಿ, ನೀರಿನಲ್ಲಿ ನೆನೆಸಿ ತಯಾರಿಸಿದ ಜ್ಯೂಸ್ ಕುಡಿಯುವ ಅಭ್ಯಾಸ ಮಾಡಿಕೊಂಡರೆ ತಲೆ ನೋವಿನ ಸಮಸ್ಯೆ ದೂರವಾಗುತ್ತದೆ ಎಂದು ಅಧ್ಯಯನಗಳು ಹೇಳಿವೆ.
  • ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು: ಮರಗೆಣಸಿನಲ್ಲಿ ವಿಟಮಿನ್ ‘ಎ’ ಅಂಶ ಅಧಿಕವಾಗಿರುವುದರಿಂದ, ಇದನ್ನು ನಿಯಮಿತವಾಗಿ ಆಹಾರಕ್ರಮದಲ್ಲಿ ಸೇರಿಸಿಕೊಂಡರೆ ಕಣ್ಣು ಮಂಜಾಗುವ ಸಮಸ್ಯೆ ದೂರವಾಗಿ, ಕಣ್ಣುಗಳ ಆರೋಗ್ಯ ಚೆನ್ನಾಗಿರುತ್ತದೆ.
  • ಜೀರ್ಣಕ್ರಿಯೆ ಮತ್ತು ಹೊಟ್ಟೆ ಹಸಿವು: ಮರಗೆಣಸಿನಲ್ಲಿ ಅಧಿಕ ಪ್ರಮಾಣದ ನಾರಿನಾಂಶ ಇರುವುದರಿಂದ ಇದು ಜೀರ್ಣ ಪ್ರಕ್ರಿಯೆಗೆ ಸಹಕಾರಿಯಾಗಿದೆ. ನಾರಿನಾಂಶವು ಕರುಳಿನಲ್ಲಿನ ವಿಷಕಾರಿ ಅಂಶಗಳನ್ನು ಹೀರಿಕೊಂಡು, ಜಠರ ನಾಳದ ಉರಿಯೂತವನ್ನು ಕಡಿಮೆ ಮಾಡಿ, ಆಹಾರ ಸರಿಯಾದ ಪ್ರಮಾಣದಲ್ಲಿ ಜೀರ್ಣವಾಗಲು ನೆರವಾಗುತ್ತದೆ. ಅಜೀರ್ಣತೆಯಿಂದ ಹೊಟ್ಟೆ ಹಸಿವು ಇಲ್ಲದವರು ಮರಗೆಣಸಿನ ಚೂರುಗಳನ್ನು ಸೇವಿಸಿದರೆ ಜೀರ್ಣಶಕ್ತಿ ಹೆಚ್ಚಾಗಿ ಹೊಟ್ಟೆ ಹಸಿವು ವೃದ್ಧಿಯಾಗುತ್ತದೆ ಎಂದು ಹೇಳಲಾಗುತ್ತದೆ.
  • ದೇಹದ ತೂಕ ಇಳಿಕೆಗೆ ಸಹಕಾರಿ: ಆಹಾರ ಪದ್ಧತಿಯ ಮೂಲಕ ತೂಕ ಇಳಿಸಲು ಬಯಸುವವರಿಗೆ ಮರಗೆಣಸು ಉತ್ತಮ ಆಯ್ಕೆಯಾಗಿದೆ. ಇದರಲ್ಲಿರುವ ಯಥೇಚ್ಛವಾದ ನಾರಿನಾಂಶದಿಂದಾಗಿ ದೇಹದಲ್ಲಿನ ಕೆಟ್ಟ ಕೊಬ್ಬಿನ ಅಂಶ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಅಂಶ ನಿವಾರಣೆಯಾಗಿ ಬೊಜ್ಜು ಶೇಖರಣೆ ಆಗದಂತೆ ತಡೆಯುತ್ತದೆ. ಅಲ್ಲದೆ, ಪದೇ ಪದೇ ತಿನ್ನುವ ಬಯಕೆ ಕಡಿಮೆಯಾಗಿ ದೇಹದ ತೂಕ ನಿಯಂತ್ರಣಕ್ಕೆ ಬರುತ್ತದೆ.
share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಭಾರತೀಯ ಗೇಮಿಂಗ್ ಪ್ರಿಯರಿಗೆ ಶುಭಸುದ್ದಿ: ಮಾರುಕಟ್ಟೆಗೆ ಲಗ್ಗೆ ಇಟ್ಟ ಡೆಲ್‌ನ ಶಕ್ತಿಶಾಲಿ ಏಲಿಯನ್‌ವೇರ್ ಲ್ಯಾಪ್‌ಟಾಪ್‌ಗಳು

ಡೆಲ್ ಭಾರತದಲ್ಲಿ ಹೊಸ ಏಲಿಯನ್‌ವೇರ್ ಗೇಮಿಂಗ್ ಲ್ಯಾಪ್‌ಟಾಪ್‌ಗಳನ್ನು ಬಿಡುಗಡೆ ಮಾಡಿದೆ. ನೂತನ ಬೆಲೆ, ಡಿಸ್ಪ್ಲೇ ಮತ್ತು ಪ್ರೊಸೆಸರ್ ವೈಶಿಷ್ಟ್ಯಗಳ ವಿವರ ಇಲ್ಲಿದೆ.

ದಿನ ವಿಶೇಷ – ರಾಷ್ಟ್ರೀಯ ಧ್ವಜ ದತ್ತು ದಿನ

ಪ್ರತಿ ವರ್ಷ ಜುಲೈ 22 ರಂದು ಭಾರತದ ರಾಷ್ಟ್ರೀಯ ಧ್ವಜ ದತ್ತು ದಿನವನ್ನು ಆಚರಿಸಲಾಗುತ್ತದೆ. ತಿರಂಗಾ ಧ್ವಜದ ಇತಿಹಾಸ, ವಿನ್ಯಾಸ ಮತ್ತು ಮಹತ್ವದ ಸಂಪೂರ್ಣ ವಿವರ ಇಲ್ಲಿದೆ.

ಸೂಪರ್‌ಫುಡ್ ಪೀಚ್: ಪ್ರತಿದಿನ ಈ ಒಂದು ಹಣ್ಣು ತಿಂದರೆ ಹೃದಯ, ಕಣ್ಣುಗಳಿಗೆ ಎಷ್ಟು ಲಾಭ ಗೊತ್ತಾ?

ನಿತ್ಯ ಪೀಚ್ ಹಣ್ಣು ಸೇವಿಸುವುದರಿಂದ ಲಭಿಸುವ ಆರೋಗ್ಯಕಾರಿ ಲಾಭಗಳು, ರೋಗನಿರೋಧಕ ಶಕ್ತಿ, ಹೃದಯದ ಭದ್ರತೆ ಹಾಗೂ ಕಣ್ಣಿನ ದೃಷ್ಟಿ ಹೆಚ್ಚಿಸುವ ವಿವರ ಇಲ್ಲಿದೆ.

ತುಳುವ ಮಹಾಸಭೆ ಉಡುಪಿ ಅಧ್ಯಕ್ಷರಾಗಿ ಉದಯ ಕುಮಾರ್ ಹೆಗ್ಡೆ ಆಯ್ಕೆ

ತುಳುವ ಮಹಾಸಭೆ ಇಂಟರ್ನ್ಯಾಷನಲ್ ಉಡುಪಿ ಜಿಲ್ಲಾ ಅಧ್ಯಕ್ಷರಾಗಿ ಯರ್ಲಪಾಡಿ ಉದಯ ಕುಮಾರ್ ಹೆಗ್ಡೆ ಆಯ್ಕೆಯಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ