
ನೀವು ಪ್ರಯಾಣ ಮಾಡುವಾಗ ವಾಂತಿ ಅಥವಾ ವಾಕರಿಕೆ ಸಮಸ್ಯೆ ಎದುರಿಸುವುದು ಸಾಮಾನ್ಯ. ಇದಕ್ಕೆ ಮುಖ್ಯ ಕಾರಣ, ವಾಹನದ ಚಲನೆ ಮತ್ತು ದೇಹದ ಸಮತೋಲನದಲ್ಲಿನ ವ್ಯತ್ಯಾಸ. ಇದು ಪ್ರಯಾಣದ ಆನಂದವನ್ನು ಹಾಳು ಮಾಡುತ್ತದೆ. ಆದರೆ, ಕೆಲವು ಸರಳ ಮನೆಮದ್ದುಗಳನ್ನು ಅನುಸರಿಸುವ ಮೂಲಕ ಈ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.
ವಾಕರಿಕೆ ಮತ್ತು ವಾಂತಿಗೆ ಪರಿಣಾಮಕಾರಿ ಪರಿಹಾರಗಳು
- ಶುಂಠಿ: ಸ್ವಲ್ಪ ಶುಂಠಿಯನ್ನು ಬಾಯಿಯಲ್ಲಿ ಇಟ್ಟುಕೊಳ್ಳಿ ಅಥವಾ ಶುಂಠಿಯನ್ನು ನೀರಿನಲ್ಲಿ ಕದಿಸಿ ಕುಡಿಯುವುದರಿಂದ ವಾಂತಿ ನಿಯಂತ್ರಣಕ್ಕೆ ಬರುತ್ತದೆ.
- ನಿಂಬೆ ಮತ್ತು ಉಪ್ಪು: ನಿಂಬೆಹಣ್ಣನ್ನು ಬಾಯಿ ಹಾಕಿ ಸವಿಯುವುದರಿಂದ ಅಥವಾ ಉಪ್ಪು ಮತ್ತು ಸಕ್ಕರೆ ಬೆರೆಸಿದ ನಿಂಬೆ ನೀರನ್ನು ಸ್ವಲ್ಪ ಸ್ವಲ್ಪವೇ ಕುಡಿಯುವುದರಿಂದ ಪರಿಹಾರ ಸಿಗುತ್ತದೆ.
- ಲವಂಗ: ಒಂದು ಚಮಚ ಲವಂಗವನ್ನು ಒಂದು ಕಪ್ ಬಿಸಿ ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ಪ್ರಯಾಣದ ವಾಂತಿಯಿಂದ ಮುಕ್ತಿ ಸಿಗುತ್ತದೆ.
- ಸೋಂಪು: ಒಂದೆರಡು ಸೋಂಪು ಕಾಳುಗಳನ್ನು ನಿಧಾನವಾಗಿ ಜಗಿದು ತಿನ್ನುವುದು ಅಥವಾ ಸೋಂಪು ನೀರನ್ನು ಕುಡಿಯುವುದು ಕೂಡ ಉತ್ತಮ ಪರಿಹಾರ.
- ಕಿತ್ತಳೆ ಹಣ್ಣು: ಪ್ರಯಾಣದ ಸಮಯದಲ್ಲಿ ಕಿತ್ತಳೆ ಹಣ್ಣನ್ನು ತಿನ್ನುವುದರಿಂದ ಅಥವಾ ಕಿತ್ತಳೆ ರಸವನ್ನು ಕುಡಿಯುವುದರಿಂದ ವಾಂತಿ ಬರುವುದಿಲ್ಲ.
- ಆಳವಾದ ಉಸಿರಾಟ: ವಾಕರಿಕೆಯಾದಾಗ ಗಾಡಿ ನಿಲ್ಲಿಸಿ ಆಳವಾದ ಉಸಿರು ತೆಗೆದುಕೊಳ್ಳಿ. ಈ ವಿಧಾನವು ಮಾನಸಿಕವಾಗಿ ಮತ್ತು ದೈಹಿಕವಾಗಿ ನಿಮಗೆ ಹಿತ ನೀಡುತ್ತದೆ.
- ನೀರು ಕುಡಿಯುವುದು: ವಾಂತಿಯಾದಾಗ ಒಮ್ಮೆಲೆ ಹೆಚ್ಚು ನೀರು ಕುಡಿಯದೆ, ಸ್ವಲ್ಪ ಸ್ವಲ್ಪವೇ ನೀರನ್ನು ಕುಡಿಯಿರಿ.
ಈ ಮನೆಮದ್ದುಗಳು ತಾತ್ಕಾಲಿಕ ಪರಿಹಾರವನ್ನು ನೀಡಬಹುದು. ಜೊತೆಗೆ, ಪ್ರಯಾಣದ ಸಮಯದಲ್ಲಿ ಸ್ವಚ್ಛವಾದ ಆಹಾರವನ್ನು ಸೇವಿಸುವುದು ಮತ್ತು ಅನಗತ್ಯವಾಗಿ ಭಾರೀ ಆಹಾರವನ್ನು ತಿನ್ನುವುದನ್ನು ತಪ್ಪಿಸುವುದು ಮುಖ್ಯ.