
ಮಳೆಗಾಲ ಎಂದರೆ ಕವಿತೆಯಂತಹ ಭಾವನೆ, ನೆನೆಪುಗಳೊಂದಿಗೆ ಬರುವ ಋತು. ಮಳೆಯಲ್ಲೇ ನಿಂತು ಒದ್ದೆಯಾಗುವುದು ಹಲವರಿಗೆ ಸಂತೋಷವನ್ನು ತರುತ್ತದೆ . ಇದು ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೂ ನೇರವಾಗಿ ಪ್ರಭಾವ ಬೀರುತ್ತದೆ ಎಂಬುವುದು ಹಲವಾರು ಅಧ್ಯಯನಗಳ ಪ್ರಕಾರ ತಿಳಿದು ಬಂದಿದೆ.
ಮಳೆ ನೀರಿನ pH ಮಟ್ಟ ಕಡಿಮೆ ಇರುವುದು ದೇಹದಲ್ಲಿ ಎಂಡಾರ್ಫಿನ್ ಮತ್ತು ಸೆರೋಟೋನಿನ್ ಹಾರ್ಮೋನುಗಳನ್ನು ಬಿಡುಗಡೆ ಮಾಡಲು ಸಹಕಾರಿಯಾಗುತ್ತದೆ. ಇವುಗಳು ನಮ್ಮ ಮನಸ್ಸಿಗೆ ಆನಂದದ ಭಾವನೆಯನ್ನು ನೀಡುತ್ತವೆ. ಅಲ್ಲದೆ, ಮಳೆಯಲ್ಲಿ ನಡೆದುಬರುವುದು ಅಥವಾ ಒದ್ದೆಯಾಗುವುದು ದೈಹಿಕ ಉಲ್ಲಾಸಕ್ಕೆ ಕಾರಣವಾಗಬಹುದು.
ಮಳೆ ನೀರಿನಲ್ಲಿ ಸ್ನಾನ ಮಾಡುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗಬಹುದು ಎಂದು ಕೆಲ ಅಧ್ಯಯನಗಳು ಸೂಚಿಸುತ್ತವೆ. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ ಹಾಗೂ ವ್ಯಕ್ತಿಯನ್ನು ಶಾರೀರಿಕವಾಗಿ ಚುರುಕಾಗಿಸುತ್ತದೆ.
ಆದರೆ, ವೈದ್ಯಕೀಯ ತಜ್ಞರು ಮಳೆನೀರಿನಲ್ಲಿ ದೀರ್ಘಕಾಲ ಒದ್ದೆಯಾಗಿರುವುದು ಶೀತ, ಕೆಮ್ಮು, ಅಥವಾ ಚರ್ಮ ಸಮಸ್ಯೆಗಳಿಗೆ ಕಾರಣವಾಗಬಹುದು. ಪ್ರಾಣಿಯ ಶಿಲೀಂಧ್ರ, ಕೀಟನಾಶಕ ಮಿಶ್ರಣ ಅಥವಾ ಧೂಮವಾಯುಗಳಿಂದ ಮಿಶ್ರಿತ ಮಳೆನೀರು ಕೆಲವೊಮ್ಮೆ ಹಾನಿಕರವಾಗಬಹುದು ಎಚ್ಚರಿಕೆ ನೀಡಿದ್ದಾರೆ .