
ಆಧುನಿಕ ಜೀವನಶೈಲಿ ಮತ್ತು ಅಸ್ವಸ್ಥ ಆಹಾರ ಪದ್ಧತಿಗಳ ನಡುವೆ ಆರೋಗ್ಯವನ್ನು ಕಾಯ್ದುಕೊಳ್ಳುವುದು ದೊಡ್ಡ ಸವಾಲಾಗಿದೆ. ಹಳೇ ಕಾಲದಂತೆ ನೈಸರ್ಗಿಕ, ಶುದ್ಧ ಆಹಾರದ ಸೇವನೆ ಈಗ ಕಡಿಮೆಯಾಗಿದ್ದು, ದೇಹದ ವಿವಿಧ ಅಂಗಾಂಗಗಳಲ್ಲಿ ಅಶುದ್ಧತೆ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ. ಆದರೆ ನಿತ್ಯ ಆಹಾರದಲ್ಲಿ ಕೆಲವೊಂದು ಖಾದ್ಯಗಳನ್ನು ಸೇರಿಸಿಕೊಂಡರೆ, ದೇಹವನ್ನು ಒಳಗಿನಿಂದ ಶುದ್ಧಗೊಳಿಸಬಹುದಾಗಿದೆ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಿದ್ದಾರೆ.
🔹 ದೇಹದ ಸಾಮಾನ್ಯ ಶುದ್ಧತೆಗೆ ಸಹಕಾರಿ ಆಹಾರಗಳು:
ಬೆಳ್ಳುಳ್ಳಿ, ಅರಿಶಿನ, ಬೀಟ್ರೂಟ್, ಹಸಿರು ಸೊಪ್ಪುಗಳು, ಗ್ರೀನ್ ಟೀ, ಆಲಿವ್ ಎಣ್ಣೆ, ಕಾಫಿ ಮತ್ತು ವಾಲ್ ನಟ್ – ಈ ಪದಾರ್ಥಗಳು ದೇಹದ ವಿವಿಧ ಅಂಗಾಂಗಗಳಲ್ಲಿ ಜಮೆಯಾಗಿರುವ ವಿಷಕಾರಿ ಪದಾರ್ಥಗಳನ್ನು ಹೊರಹಾಕಲು ನೆರವಾಗುತ್ತವೆ.
🔹 ಶ್ವಾಸಕೋಶ ಶುದ್ಧತೆಗಾಗಿ:
ಹೂಕೋಸು, ಎಲೆಕೋಸು, ನಿಂಬೆ ಹಣ್ಣು, ಕಿತ್ತಳೆ ಹಣ್ಣು, ಮೊಳಕೆ ಕಾಳುಗಳನ್ನು ನಿತ್ಯ ಆಹಾರದಲ್ಲಿ ಸೇರಿಸಬೇಕೆಂದು ತಜ್ಞರು ತಿಳಿಸುತ್ತಾರೆ.
🔹 ಚರ್ಮ ಶುದ್ಧತೆಗಾಗಿ:
ವಾಲ್ ನಟ್, ಟೊಮೇಟೋ, ಕ್ಯಾರೆಟ್, ಸಿಹಿ ಗೆಣಸು, ದ್ರಾಕ್ಷಿ ಹಣ್ಣು ಹಾಗೂ ಸೌತೆಕಾಯಿ ಸೇವನೆಯು ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ.
🔹 ಹೃದಯ ಶುದ್ಧತೆಗೆ:
ಪಾಲಕ್ ಸೊಪ್ಪು, ಚಿಕನ್, ನವಣೆ, ಬ್ರೌನ್ ರೈಸ್, ಅರಿಶಿನ ಮತ್ತು ಬೆಳ್ಳುಳ್ಳಿ ಸೇವನೆಯು ಹೃದಯಕ್ಕೆ ಹಿತಕರ.
🔹 ಮೆದುಳಿಗೆ ಶುದ್ಧತೆ ಮತ್ತು ಚುರುಕುತೆಗಾಗಿ:
ಅರಿಶಿನ, ಗ್ರೀನ್ ಟೀ, ಡಾರ್ಕ್ ಚಾಕ್ಲೇಟ್ ಸೇವನೆಯು ಮೆದುಳಿಗೆ ಶಕ್ತಿಯೊಂದಿಗೆ ತಾಜಾತನ ನೀಡುತ್ತದೆ.
ಈ ಆಹಾರ ಪದಾರ್ಥಗಳನ್ನು ನಿಯಮಿತವಾಗಿ ಬಳಸಿ, ಜಂಕ್ ಫುಡ್ ಸೇವನೆಯಿಂದ ದೂರವಿದ್ದರೆ ದೇಹದ ಎಲ್ಲಾ ಅಂಗಾಂಗಗಳು ಸಮತೋಲನದಲ್ಲಿದ್ದು, ಆರೋಗ್ಯಕರ ಜೀವನಶೈಲಿ ಸಾಧ್ಯವಾಗುತ್ತದೆ.