
ಹಸಿ ಧಾನ್ಯಗಳಲ್ಲಿ ವಿಶೇಷ ಸ್ಥಾನ ಪಡೆದಿರುವ ಮೊಳಕೆಯೊಡೆದ ಮೆಂತ್ಯವು ಗಾತ್ರದಲ್ಲಿ ಚಿಕ್ಕದಾದೂ ಆರೋಗ್ಯದ ಪಾಲಿಗೆ ಬಹುಮುಖ್ಯವಾದ ಆಹಾರವಾಗಿದೆ. ಇದರಲ್ಲಿ ವಿಟಮಿನ್ ಸಿ, ವಿಟಮಿನ್ ಎ ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದ್ದು, ದೈನಂದಿನ ಆಹಾರದಲ್ಲಿ ಇದನ್ನು ಸೇರಿಸಿಕೊಂಡರೆ ಆರೋಗ್ಯಕ್ಕೆ ಬಹಳಷ್ಟು ಲಾಭಗಳನ್ನು ನೀಡುತ್ತದೆ.
ಬೆಳಿಗ್ಗೆ ಖಾಲಿ ಹೊಟ್ಟೆಗೆ ಮೊಳಕೆಯೊಡೆದ ಮೆಂತ್ಯವನ್ನು ಸೇವಿಸುವುದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಋತುಮಾನದ ರೋಗಗಳು, ಸಾಂಕ್ರಾಮಿಕ ಸೋಂಕುಗಳಿಂದ ರಕ್ಷಣೆ ನೀಡುತ್ತದೆ. ಜೊತೆಗೆ ಜೀರ್ಣಕ್ರಿಯೆ ಸುಧಾರಣೆಯಲ್ಲಿಯೂ ಇದು ಪರಿಣಾಮಕಾರಿಯಾಗಿದೆ.

ಮಂತ್ಯ ಮೊಳಕೆಗಳಲ್ಲಿ ಕಂಡುಬರುವ ಫೈಬರ್ ಹೊಟ್ಟೆ ತುಂಬುವ ಭಾವನೆ ನೀಡುತ್ತದೆ ಹಾಗೂ ಜೀರ್ಣಕ್ರಿಯೆಗೆ ನೆರವಾಗುತ್ತದೆ. ಊಟಕ್ಕೆ ಮೊದಲು ಸೇವಿಸಿದರೆ ಎದೆಯುರಿ, ಸಾಯಂಕಾಲದ ಬಾಯಾರಿಕೆಯಂಥ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.
ಮಧುಮೇಹ ರೋಗಿಗಳಿಗೆ ಇದು ಸಹಾಯಕವಾಗಿದೆ ಎಂಬಂತೆ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಿ, ಹೃದಯದ ಆರೋಗ್ಯ ರಕ್ಷಣೆಗೊಳ್ಳುತ್ತದೆ. ಜೊತೆಗೆ ಹೊಟ್ಟೆಯ ಕೊಬ್ಬು ಕಡಿಮೆಮಾಡಲು ಹಾಗೂ ದೇಹದ ತೂಕ ನಿಯಂತ್ರಿಸಲು ಸಹಾಯ ಮಾಡುತ್ತದೆ.