
ಹಾಗಲಕಾಯಿ – ಹಾಗಲಕಾಯಿ ಕೇವಲ ಮಧುಮೇಹಿಗಳಿಗೆ ಮಾತ್ರವಲ್ಲ, ಅದರ ಬೀಜಗಳಲ್ಲಿಯೂ ಹಲವಾರು ಔಷಧೀಯ ಗುಣಗಳಿವೆ. ಇವುಗಳಲ್ಲಿರುವ ಫೈಬರ್, ಪ್ರೋಟೀನ್, ಐರನ್, ಮೆಗ್ನೀಷಿಯಂ ಮತ್ತು ವಿಟಮಿನ್ ಸಿ ಯಂತಹ ಪೋಷಕಾಂಶಗಳು ದೇಹಕ್ಕೆ ಬಹಳ ಪ್ರಯೋಜನಕಾರಿ. ಇದರಲ್ಲಿರುವ ‘ಮೊಮೊರ್ಡಿಸಿನ್’ ಎಂಬ ಅಮೈನೋ ಆಸಿಡ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.
ಇತ್ತೀಚಿನ ಅಧ್ಯಯನದ ಪ್ರಕಾರ, ಹಾಗಲಕಾಯಿ ಬೀಜದಲ್ಲಿರುವ ‘ಚಾರಂಟಿನ್’ ಎಂಬ ಅಂಶವು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ. ಇವು ಚರ್ಮದ ಸಮಸ್ಯೆಗಳಾದ ಮೊಡವೆ, ಎಕ್ಸಿಮಾ ಮತ್ತು ಕೊಲೆಸ್ಟ್ರಾಲ್ ಕಡಿಮೆ ಮಾಡುವಲ್ಲಿ ಸಹಕಾರಿಯಾಗಿವೆ. ಆದರೆ, ಇಷ್ಟೆಲ್ಲಾ ಪ್ರಯೋಜನಗಳಿದ್ದರೂ, ಹಾಗಲಕಾಯಿ ಬೀಜಗಳನ್ನು ಅತಿಯಾಗಿ ಸೇವಿಸಿದರೆ ವಾಕರಿಕೆ, ಉಬ್ಬರ, ಅಥವಾ ಕಡಿಮೆ ರಕ್ತಶುದ್ಧಿಯಂತಹ ಸಮಸ್ಯೆಗಳು ಬರಬಹುದು. ಗರ್ಭಿಣಿಯರು ಇದನ್ನು ಸೇವಿಸುವುದರಿಂದ ಗರ್ಭಪಾತದ ಅಪಾಯವಿರುತ್ತದೆ.
ವೈದ್ಯರ ಸಲಹೆಯಿಲ್ಲದೆ ಹಾಗಲಕಾಯಿ ಬೀಜಗಳನ್ನು ಸೇವಿಸಬಾರದು ಎಂದು ತಜ್ಞರು ಎಚ್ಚರಿಸಿದ್ದಾರೆ. ವಿಶೇಷವಾಗಿ ಹಿಮೋಗ್ಲೋಬಿನ್ ಕಡಿಮೆ ಇರುವವರು, ಹೈಪೋಗ್ಲೈಸಿಮಿಯಾ ರೋಗಿಗಳು, ಮಕ್ಕಳು, ವಯಸ್ಸಾದವರು ಮತ್ತು ಮೂತ್ರಪಿಂಡದ ಸಮಸ್ಯೆ ಇರುವವರು ಈ ಬೀಜಗಳಿಂದ ದೂರವಿರುವುದು ಉತ್ತಮ.