
ಯುವಶಕ್ತಿ ಬೆಳುವಾಯಿ ವಾಟ್ಸಾಪ್ ಬಳಗ ಇದರ 12 ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇವರ ಸಹಯೋಗದೊಂದಿಗೆ ಆಧಾರ್ ನೊಂದಣಿ, ತಿದ್ದುಪಡಿ ಹಾಗೂ ಅಂಚೆ ಇಲಾಖೆ-ಸಮಗ್ರ ರಕ್ಷಣಾ ಯೋಜನೆ (ಅಪಘಾತ ವಿಮೆ ₹ 549 /₹ 749 ) ನೊಂದಣಿ ಕಾರ್ಯಕ್ರಮವು ಸೆ.17 ರಂದು ಬೆಳುವಾಯಿ ಸೆಂಟ್ರಲ್ ಕಾಂಪ್ಲೆಕ್ಸ್ ಆವರಣದಲ್ಲಿ ಬೆಳಿಗ್ಗೆ 9.30ರಿಂದ ಸಂಜೆ 4.00 ರವರೆಗೆ ಜರಗಲಿದೆ.
ಇದೆ ಸಂದರ್ಭದಲ್ಲಿ ಬೆಳುವಾಯಿ ಶ್ರೀ ಗುರುಬಸವ ಕ್ಲಿನಿಕ್ ನ ವೈದ್ಯರಾದ ಡಾ.ಅಶ್ವೀನ್ ಕುಮಾರ್ ಜಿ.ಕೆ ವೈದ್ಯಕೀಯ ಸಲಹೆ ನೀಡಲಿದ್ದು, ಬೆಳುವಾಯಿ ಲ್ಯಾಬ್ ಟೆಕ್ ಡಯಾಗ್ನೊನಿಕ್ ಲ್ಯಾಬೋರೇಟರಿ ಇವರಿಂದ ಉಚಿತ ಮಧುಮೇಹ ತಪಾಸಣೆ ನಡಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಈ ಎಲ್ಲಾ ಸೇವೆಗಳಿಗೆ ಬೇಕಾದ ದಾಖಾಲೆಗಳನ್ನು ಕಡ್ಡಾಯವಾಗಿ ತರಬೇಕಾಗಿ ವಿನಂತಿ.
ಹೆಚ್ಚಿನ ಮಾಹಿತಿಗಾಗಿ 80955 31595, & 9663766014, & 9900113134 ಮೂಲಕ ಸಂಪರ್ಕಿಸಬಹುದು ಎಂದು ಸಂಘಟಕರು ತಿಳಿಸಿದ್ದಾರೆ.