
ಯೂರಿ ಗಗಾರಿನ್
1961 ಏಪ್ರಿಲ್ 12 ರಂದು ಸುಮಾರು ಒಂದೂವರೆ ಗಂಟೆಗಳನ್ನು ಮಿಕ್ಕಿ (108ನಿಮಿಷ)ಆಕಾಶದಲ್ಲಿ ಹಾರಾಡಿದ ಮೊದಲ ಮಾನವ. ರಷ್ಯಾದ ಒಂದು ಹಳ್ಳಿಯಲ್ಲಿ ಹುಟ್ಟಿ ಕಠಿಣವಾದ ಸಾಹಸಗಳನ್ನೇ ಪ್ರವೃತ್ತಿಯನ್ನಾಗಿಸಿಕೊಂಡ ಗಗಾರಿನ್ ಇವತ್ತು ಆಕಾಶಕ್ಕೆ ಹಾರುವ ಎಲ್ಲರಿಗೂ ಮೊದಲಿಗರಾಗಿದ್ದಾರೆ. ಇಷ್ಟೆಲ್ಲ ವ್ಯವಸ್ಥೆಗಳಿರುವಾಗಲು ಕೂಡ ನಮಗೆ ವಿಮಾನದಲ್ಲಿ ಕುಳಿತುಕೊಳ್ಳುವಾಗ ಏನೋ ಒಂದು ಭಯ ಒಮ್ಮೆಲೆ ಬಂದು ಹೋಗುತ್ತದೆ. ಹಾಗಿರುವಾಗ 70 ವರ್ಷಗಳ ಹಿಂದೆ ಇಷ್ಟೆಲ್ಲ ಯಾವ ಸೌಲಭ್ಯಗಳಿಲ್ಲದಿದ್ದರೂ ಕೂಡ ಬಾಹ್ಯಾಕಾಶಕ್ಕೆ ಹಾರಿದ ಇವರ ಧೈರ್ಯ ನಮಗೆ ಮಾದರಿಯಾಗಬೇಕು. ಧೈರ್ಯ ಹಾಗೂ ನಾವು ಸ್ವೀಕಾರ ಮಾಡಿಕೊಂಡಿರುವ ಕಾರ್ಯದ ಕಠಿಣತೆಯ ಮೇಲೆ ನಮ್ಮ ಶ್ರೇಯಸ್ಸು ಅಡಗಿರುತ್ತದೆ ಎನ್ನುವುದಕ್ಕೆ ಇವರೇ ಸಾಕ್ಷಿ.
ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ