ಯೂಟ್ಯೂಬ್ ಡೌನ್: ಜಾಗತಿಕವಾಗಿ ವಿಡಿಯೋ ಸ್ಟ್ರೀಮಿಂಗ್ ಸ್ಥಗಿತ, ಮುಂಜಾನೆದ್ದು ಆಪ್ ಓಪನ್ ಮಾಡಿದವರಿಗೆ ಬಿಗ್‌ಶಾಕ್!

Date:

spot_img

ಬೆಂಗಳೂರು : ಬುಧವಾರ ಮುಂಜಾನೆ ವಿಶ್ವದಾದ್ಯಂತ ಜನಪ್ರಿಯ ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಆದ ‘ಯೂಟ್ಯೂಬ್’ (YouTube) ತಾಂತ್ರಿಕ ದೋಷದಿಂದಾಗಿ ಸ್ಥಗಿತಗೊಂಡಿದ್ದು, ಕೋಟ್ಯಂತರ ಬಳಕೆದಾರರು ತೊಂದರೆ ಅನುಭವಿಸಿದರು. ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಮೊಬೈಲ್‌ನಲ್ಲಿ ಭಕ್ತಿಗೀತೆಗಳನ್ನು ಕೇಳುವ ಅಥವಾ ಸುದ್ದಿಗಾಗಿ ಯೂಟ್ಯೂಬ್ ಅವಲಂಬಿಸಿರುವವರಿಗೆ ಈ ದಿಢೀರ್ ವ್ಯತ್ಯಯ ಬಿಗ್ ಶಾಕ್ ನೀಡಿದೆ.

ಬಳಕೆದಾರರು ಆಪ್ ಓಪನ್ ಮಾಡಿದ ಕೂಡಲೇ ಯಾವುದೇ ವಿಡಿಯೋಗಳು ಲಭ್ಯವಾಗದೆ, ‘ಸಮ್‌ಥಿಂಗ್ ವೆಂಟ್ ರಾಂಗ್’ (Something went wrong) ಎಂಬ ದೋಷದ ಸಂದೇಶ ಕಾಣಿಸಿಕೊಂಡಿದೆ. ಆರಂಭದಲ್ಲಿ ಅನೇಕರು ಇದು ತಮ್ಮ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಸಮಸ್ಯೆ ಎಂದು ಭಾವಿಸಿದ್ದರು. ಆದರೆ, ಇದು ಜಾಗತಿಕವಾಗಿ ಎದುರಾದ ತಾಂತ್ರಿಕ ಸಮಸ್ಯೆಯಾಗಿತ್ತು. ಡೌನ್ ಡಿಟೆಕ್ಟರ್ (DownDetector) ವರದಿಯ ಪ್ರಕಾರ, ಕೇವಲ ಅಮೆರಿಕದಲ್ಲೇ ಸುಮಾರು 3,20,000 ಕ್ಕೂ ಹೆಚ್ಚು ಮಂದಿ ಈ ಸಮಸ್ಯೆಯ ಬಗ್ಗೆ ದೂರು ದಾಖಲಿಸಿದ್ದಾರೆ.

ಭಾರತದ ವಿವಿಧ ಭಾಗಗಳಲ್ಲೂ ಲಕ್ಷಾಂತರ ಜನರು ಯೂಟ್ಯೂಬ್ ಲೋಗೋ ಮಾತ್ರ ಕಾಣುತ್ತಿದ್ದು, ವಿಡಿಯೋ ಪ್ಲೇ ಆಗುತ್ತಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ಹೊರಹಾಕಿದ್ದಾರೆ. ಸರ್ಚ್ ಎಂಜಿನ್‌ನಲ್ಲಿ ಯಾವುದೇ ಮಾಹಿತಿಯನ್ನು ಹುಡುಕಲು ಸಾಧ್ಯವಾಗದೆ ಇರುವುದು ಕಚೇರಿ ಕೆಲಸ ಮತ್ತು ಮನರಂಜನೆಗೆ ಅಡ್ಡಿಯುಂಟು ಮಾಡಿದೆ. ಪ್ರಸ್ತುತ ಯೂಟ್ಯೂಬ್ ತಂಡವು ಈ ಸಮಸ್ಯೆಯನ್ನು ಸರಿಪಡಿಸುವ ಕಾರ್ಯದಲ್ಲಿ ನಿರತವಾಗಿದೆ ಎಂದು ತಿಳಿದುಬಂದಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಶಾಲಾ-ಆಸ್ಪತ್ರೆಗಳಲ್ಲಿ ಜಂಕ್ ಫುಡ್ ನಿಷೇಧ: ಯು.ಟಿ. ಖಾದರ್ ಎಚ್ಚರಿಕೆ

ರಾಜ್ಯದ ಎಲ್ಲಾ ಶಾಲೆ ಮತ್ತು ಆಸ್ಪತ್ರೆಗಳ ಕ್ಯಾಂಟೀನ್‌ಗಳಲ್ಲಿ ಜಂಕ್ ಫುಡ್ ಮಾರಾಟ ನಿಷೇಧಿಸಲು ಸರ್ಕಾರ ತೀರ್ಮಾನಿಸಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಬೈಗುಳಗಳು ಅಶ್ಲೀಲತೆಯಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಸಾಮಾನ್ಯ ಬೈಗುಳಗಳು ಕಾನೂನಿನ ಪ್ರಕಾರ ಅಶ್ಲೀಲತೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಮೂಡಬಿದಿರೆಯಲ್ಲಿ ವಿವಾಹಿತೆ ಆತ್ಮಹತ್ಯೆ | ಕಾರಣದ ಪತ್ತೆಗೆ ಪೊಲೀಸ್ ತನಿಖೆ

ಮೂಡಬಿದಿರೆಯ ಕುಬೇರು ಗ್ರಾಮದಲ್ಲಿ ವಿವಾಹಿತೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಕಾರ್ಕಳ ಕಾಂಗ್ರೆಸ್ ನಾಟಕಕ್ಕೆ ಬಿಜೆಪಿ ತಿರುಗೇಟು

ಕಾರ್ಕಳದಲ್ಲಿ ಕಾಂಗ್ರೆಸ್ ಸರ್ಕಾರದ ವೈಫಲ್ಯ ಹಾಗೂ ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಅವರ ತೀಕ್ಷ್ಣ ರಾಜಕೀಯ ತಿರುಗೇಟಿನ ಪೂರ್ಣ ಮಾಹಿತಿ ಇಲ್ಲಿದೆ ಓದಿ.