ಇಂದ್ರಾಳಿ ರೈಲು ನಿಲ್ದಾಣದ ಬಳಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಯುವಕನ ರಕ್ಷಣೆ

Date:

spot_img

ಉಡುಪಿ: ಇಂದ್ರಾಳಿ ರೈಲು ನಿಲ್ದಾಣದ ಹೊರವಲಯದ ಪಾದಚಾರಿ ಮಾರ್ಗದಲ್ಲಿ ಮಂಗಳವಾರ ನಸುಕಿನ ಜಾವ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಒಬ್ಬ ಅಪರಿಚಿತ ಯುವಕನನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಮತ್ತು ಸ್ಥಳೀಯ ಆಟೋ ಚಾಲಕರು ರಕ್ಷಿಸಿ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಯುವಕ ಅರೆಬೆತ್ತಲೆ ಸ್ಥಿತಿಯಲ್ಲಿ, ಸೊಂಟದ ಪಟ್ಟಿಯನ್ನು ಕುತ್ತಿಗೆಗೆ ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸುತ್ತಿದ್ದುದು ಕಂಡುಬಂದಿದೆ. ಸಾರ್ವಜನಿಕರು ತಕ್ಷಣ ಅವನ ಪ್ರಾಣ ಉಳಿಸಿದ್ದಾರೆ. ಯುವಕನ ಬಾಯಿ ಮತ್ತು ಮೂಗಿನಿಂದ ರಕ್ತ ಸ್ರವಿಸುತ್ತಿದ್ದುದು ಗಮನಕ್ಕೆ ಬಂದಿದ್ದು ,ಆತನು ಮಾದಕದ್ರವ್ಯಗಳನ್ನು ಸೇವಿಸಿರಬಹುದೆಂದು ಶಂಕಿಸಲಾಗಿದೆ.

ಯುವಕನು ಪ್ರಜ್ಞಾಹೀನ ಸ್ಥಿತಿಯಲ್ಲಿರುವುದರಿಂದ ಆತನ ಗುರುತು ಇನ್ನೂ ತಿಳಿದುಬಂದಿಲ್ಲ. ಆತನ ವಾರಸುದಾರರು ಜಿಲ್ಲಾ ಆಸ್ಪತ್ರೆಯ ನಾಗರಿಕ ಸಹಾಯ ಕೇಂದ್ರವನ್ನು ಸಂಪರ್ಕಿಸುವಂತೆ ಅಧಿಕಾರಿಗಳು ವಿನಂತಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಟೆಕ್ ಪ್ರಿಯರ ನಿದ್ದೆಗೆಡಿಸಿದ ‘ಲೆನೊವೊ ಟ್ಯಾಬ್ ಪ್ಲಸ್ ಜೆನ್ 2’ ಜಾಗತಿಕ ಬಿಡುಗಡೆ: ಬೆಲೆ ಮತ್ತು ವೈಶಿಷ್ಟ್ಯಗಳ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

ಲೆನೊವೊದ ಬಿಗ್ ಬ್ಯಾಂಗ್ ಎಂಟ್ರಿ! 9 ಜೆಬಿಎಲ್ ಸ್ಪೀಕರ್, 10,200mAh ಬ್ಯಾಟರಿಯ ಅತ್ಯಾಧುನಿಕ 'ಟ್ಯಾಬ್ ಪ್ಲಸ್ ಜೆನ್ 2' ಜಾಗತಿಕ ಮಾರುಕಟ್ಟೆಗೆ ಲಾಂಚ್.

ದಿನ ವಿಶೇಷ – ಮರುಭೂಮೀಕರಣ ಮತ್ತು ಬರಗಾಲ ವಿರೋಧಿ ವಿಶ್ವ ದಿನ

ಭೂಮಿಯ ಫಲವತ್ತತೆ ರಕ್ಷಿಸಲು ಮತ್ತು ಬರಗಾಲದ ಸವಾಲುಗಳನ್ನು ಎದುರಿಸಲು ಜೂನ್ 17 ರಂದು ಆಚರಿಸಲಾಗುವ ಮರುಭೂಮೀಕರಣ ವಿರೋಧಿ ದಿನದ ಮಹತ್ವ ಹಾಗೂ ಉದ್ದೇಶಗಳ ಮಾಹಿತಿ ಇಲ್ಲಿದೆ.

ಬೆಣ್ಣೆ ತಿಂದ್ರೆ ಆರೋಗ್ಯಕ್ಕೆ ಲಾಭವೋ, ನಷ್ಟವೋ? ಅಸಲಿ ವಿಷಯ ಇಲ್ಲಿದೆ ನೋಡಿ

ಮಿತವಾಗಿ ಬೆಣ್ಣೆ ಸೇವಿಸುವುದರಿಂದ ಸಿಗುವ ಅದ್ಭುತ ಆರೋಗ್ಯ ಪ್ರಯೋಜನಗಳು ಮತ್ತು ಪೋಷಕಾಂಶಗಳ ಮಾಹಿತಿ ಇಲ್ಲಿದೆ.

ಸಿಎಂ ಡಿ.ಕೆ. ಶಿವಕುಮಾರ್ ಆಡಳಿತದ ಟಾಪ್ 5 ನಿರ್ಧಾರಗಳು

ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದ ಪ್ರಮುಖ 5 ಸುಧಾರಣಾ ಕ್ರಮಗಳು ಹಾಗೂ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಯ ಪೂರ್ಣ ಮಾಹಿತಿ ಇಲ್ಲಿದೆ ಓದಿ.