spot_img

ಕ್ರಿಯೇಟಿವ್ ಕಾಲೇಜಿನಲ್ಲಿ ‘ಮನಃಶಾಂತಿಗೆ ಯೋಗ’ ಕಾರ್ಯಕ್ರಮ

Date:

ಕಾರ್ಕಳ: ಯೋಗ ದಿನಾಚರಣೆಯ ಪ್ರಯುಕ್ತ ಕಾರ್ಕಳದ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನಲ್ಲಿ 21 ಜೂನ್ 2025 ರಂದು ‘ಮನಃಶಾಂತಿಗೆ ಯೋಗ’ ಶೀರ್ಷಿಕೆಯಡಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ 2 ಗಿನ್ನಿಸ್ ದಾಖಲೆ ಸೃಷ್ಟಿಸಿ, 9 ವಿಶ್ವದಾಖಲೆ ನಿರ್ಮಿಸಿದ ಅದ್ಭುತ ಪ್ರತಿಭೆ ಉಡುಪಿಯ ಸೈಂಟ್ ಸಿಸಿಲಿ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಕುಮಾರಿ ತನುಶ್ರೀಯವರು ‘ತನು ಯೋಗ ಭೂಮಿ’ ಮುಖಾಂತರ ಯೋಗ ಪ್ರದರ್ಶನ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯರಾದ ವಿದ್ವಾನ್ ಗಣಪತಿ ಭಟ್ ರವರು ಮಾತನಾಡಿ ಯೋಗವು ಕೇವಲ ವ್ಯಾಯಾಮವಲ್ಲ. ಅದು ಬದುಕುವ ಒಂದು ಶೈಲಿ. ನಾವು ಪ್ರತಿದಿನ ಯೋಗಾಭ್ಯಾಸ ಮಾಡುವುದರಿಂದ ಆರೋಗ್ಯಕರ ಮತ್ತು ಸಂತುಷ್ಟ ಜೀವನವನ್ನು ಬದುಕಬಹುದು ಎನ್ನುತ್ತಾ ಯೋಗದ ಮಹತ್ವವನ್ನು ಕುರಿತು ತಿಳಿಸಿದರು.

ಕಾರ್ಯಕ್ರಮದ ಕೊನೆಗೆ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ತನುಶ್ರೀಯವರನ್ನು ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಬೋಧಕ – ಬೋಧಕೇತರ ವೃಂದದವರು ಉಪಸ್ಥಿತರಿದ್ದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಪ್ರಮೋದ ಮುತಾಲಿಕ್: ‘ಪಾಕ್ ಜೊತೆಗಿನ ಕ್ರಿಕೆಟ್ ಪಂದ್ಯ ದೇಶಕ್ಕೆ ದ್ರೋಹ’

ಪಾಕಿಸ್ತಾನದ ಜೊತೆಗಿನ ಕ್ರಿಕೆಟ್ ಪಂದ್ಯಗಳನ್ನು ವಿರೋಧಿಸಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಕೇಂದ್ರ ಸರ್ಕಾರ ಮತ್ತು ಬಿಸಿಸಿಐ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೃತ್ಯದ ಆರೋಪಿ ಚಿನ್ನಯ್ಯ ಬುರುಡೆ ಜಾಮೀನು ಅರ್ಜಿ ವಿಚಾರಣೆ ಸೆಪ್ಟೆಂಬರ್ 16ಕ್ಕೆ.

ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಚಿನ್ನಯ್ಯ ಬುರುಡೆಗೆ ಜಾಮೀನು ನಿರಾಕರಿಸುವಂತೆ ವಿಶೇಷ ತನಿಖಾ ದಳ (SIT) ನ್ಯಾಯಾಲಯಕ್ಕೆ ಆಕ್ಷೇಪಣೆ ಸಲ್ಲಿಸಿದೆ.

ದಿನ ವಿಶೇಷ – ಅಂತರರಾಷ್ಟ್ರೀಯ ಚಾಕೊಲೇಟ್ ದಿನ

ಅಂತರರಾಷ್ಟ್ರೀಯ ಚಾಕೊಲೇಟ್ ದಿನವು ಕೇವಲ ಒಂದು ಸಿಹಿತಿಂಡಿಯನ್ನು ತಿನ್ನುವ ದಿನವಲ್ಲ, ಬದಲಾಗಿ ಜೀವನದ ಸಣ್ಣ ಸುಖಗಳನ್ನು ಆಚರಿಸಿ

ಅಕ್ರಮ ನಾಡ ಬಂದೂಕಿನ ಆಕಸ್ಮಿಕ ಗುಂಡಿಗೆ ಹೊಸನಗರದ ವ್ಯಕ್ತಿ ಬಲಿ

ಅಕ್ರಮ ನಾಡ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಹಾರಿದ ಪರಿಣಾಮ 47 ವರ್ಷದ ವ್ಯಕ್ತಿಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.