spot_img

ಕಾರ್ಕಳದ ಕೆ.ಎಂ.ಇ.ಎಸ್ ಕಾಲೇಜಿನಲ್ಲಿ ಯೋಗದಿನಾಚರಣೆ :ಯೋಗದಿಂದ ಮಾನಸಿಕ ಆರೋಗ್ಯ ಮತ್ತು ದೈಹಿಕ ಆರೋಗ್ಯದ ವರ್ಧನೆ ಸಾಧ್ಯ

Date:

spot_img

ಕಾರ್ಕಳ : ದಿನಾಂಕ 21/06/2025ರಂದು ಅಂತರಾಷ್ಟ್ರೀಯ ಯೋಗದಿನಾಚರಣೆಯನ್ನು ಕೆ.ಎಂ.ಇ.ಎಸ್ ಕಾಲೇಜಿನಲ್ಲಿ ಆಚರಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲೇಜಿನ ಪ್ರಾಂಶುಪಾಲರದ ಶ್ರೀ ಕೆ.ಬಾಲಕೃಷ್ಣ ರಾವ್ ನೆರವೇರಿಸಿದರು.ಅವರು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ “ಯೋಗವು ಮಾನಸಿಕ ನೆಮ್ಮದಿ ಮತ್ತು ದೈಹಿಕ ಶಕ್ತಿಯನ್ನು ಕೊಡುತ್ತದೆ. ಪ್ರತಿ ದಿನವೂ ಯೋಗ ಮಾಡಿದರೆ ವೈದ್ಯರಿಂದ ದೂರವಿರಬಹುದು. ಯೋಗವು ಸರ್ವರಿಗೂ ಆರೋಗ್ಯವನ್ನೂ, ದೀರ್ಘಾಯುಷ್ಯವನ್ನು ಕೊಡುತ್ತದೆ. ಇದು ಕೇವಲ ಧಾರ್ಮಿಕ ಆಚರಣೆಯಲ್ಲ. ಇದು ಒಂದು ರೀತಿಯ ಕ್ರಮಭರಿತವಾದ ವ್ಯಾಯಾಮ. ಇದನ್ನು ಜಾತಿ ಮತ ಧರ್ಮಗಳಿಲ್ಲದೆ ಎಲ್ಲರೂ ಮಾಡಬಹುದು. ಪ್ರತಿನಿತ್ಯ ಯೋಗ ಮಾಡುವುದರಿಂದ ವಿದ್ಯಾರ್ಥಿಗಳ ಮಾನಸಿಕ ಶಕ್ತಿ, ದೈಹಿಕ ಶಕ್ತಿ ಹೆಚ್ಚಾಗಿ ಓದುವುದರ ಕಡೆಗೆ ಹೆಚ್ಚಿನ ಗಮನ ಕೊಡಲು ಸಾಧ್ಯವಾಗುತ್ತದೆ” ಎಂದು ಹೇಳಿದರು.

ಯೋಗದಿನಾಚರಣೆಯ ಈ ಸಂದರ್ಭದಲ್ಲಿ ಪ್ರಾಥಮಿಕ, ಪ್ರೌಢ ಮತ್ತು ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಂಡರು.

ಯೋಗ ನಮಸ್ಕಾರದಿಂದ ಕಾರ್ಯಕ್ರಮ ಆರಂಭಗೊಂಡಿತು. ಪ್ರಾಂಶುಪಾಲರಾದ ಕೆ. ಬಾಲಕೃಷ್ಣರಾವ್ ರವರು ಯೋಗತರಬೇತಿಯನ್ನು ಸ್ವತಃ ವಿದ್ಯಾರ್ಥಿಗಳಿಗೆ ನೀಡಿದರು. ಪ್ರಾಥಮಿಕ ವಿಭಾಗದ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ದಿವ್ಯಾ ಶೆಟ್ಟಿಯವರು ಪ್ರಾಥಮಿಕ ವಿದ್ಯಾರ್ಥಿಗಳಿಗೆ ಯೋಗತರಬೇತಿಯನ್ನು ನೀಡಿದರು. ಪ್ರೌಢಶಾಲಾ ವಿಭಾಗದ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಸುಚೇತಾ ಹೆಗ್ಡೆ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಸತೀಶ್ಚಂದ್ರ ಹೆಗ್ಡೆ ಸಹಕರಿಸಿದರು.ದೀಕ್ಷಿತಾ, ಸಂಗೀತ, ಗುರುಕುಮಾರ್ ಸಹಕರಿಸಿದರು. ಪ್ರೌಢಶಾಲಾ ಮುಖ್ಯಶಿಕ್ಷಕಿ ಶ್ರೀಮತಿ ಪಾಟ್ಕ‌ ಮತ್ತು ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕಿ ಶ್ರೀಮತಿ ಲೊಲಿಟಾ ಡಿಸಿಲ್ವಾರವರು ಕಾರ್ಯಕ್ರಮದ ಜವಬ್ದಾರಿಯನ್ನು ನಿಭಾಯಿಸಿದರು. ಯೋಗ ನಮಸ್ಕಾರದೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ಕದಂಬಿನಿ ಗಂಗೂಲಿ ಜನ್ಮದಿನ

ವೈದ್ಯಕೀಯ ಶಿಕ್ಷಣಕ್ಕೆ ಹೊಸ ದಾರಿ: ಕದಂಬಿನಿ ಗಂಗೂಲಿ ಅವರ ಜನ್ಮದಿನ

ದಾಂಪತ್ಯ ಬಿರುಕಿನ ನಡುವೆಯೂ ಪತಿ ಅಜೇಯ್ ಜೊತೆ ಸಂಸಾರ ಮರುಕಟ್ಟಲು ಬಯಸಿದ ಪತ್ನಿ ಸ್ವಪ್ನಾ

ನ್ಯಾಯಾಲಯದ ಬದಲಿಗೆ ಸಂಸಾರ ಉಳಿಸಿಕೊಳ್ಳುವ ಇಚ್ಛೆ ವ್ಯಕ್ತಪಡಿಸಿದ ಪತ್ನಿ

ಹಾಸ್ಯದ ಅಲೆಯಲ್ಲಿ ನೂರು ಕೋಟಿ ಗಳಿಸಿದ ‘ಸು ಫ್ರಮ್ ಸೋ’: ಕರಾವಳಿಯ ಹಿರಿಮೆಗೆ ಹೊಸ ಕಿರೀಟ

ಸು ಫ್ರಮ್ ಸೋ' ದರ್ಶನದಿಂದ ಕನ್ನಡ ಚಿತ್ರರಂಗಕ್ಕೆ ಹೊನ್ನಿನ ದಿನಗಳು