
ಕಾರ್ಕಳ : ಕಲ್ಲಿನ ಕೆತ್ತನೆಯಲ್ಲಿ ಅದ್ಭುತ ಚಾತುರ್ಯ ಮೆರೆಯುತ್ತಿರುವ ಯುವ ಶಿಲ್ಪಕಲಾವಿದ ಅತ್ತೂರಿನ ಯಶವಂತ್ ಆಚಾರ್ಯ ಅವರಿಗೆ ಅಂತರಾಷ್ಟ್ರೀಯ ಮಟ್ಟದ ಗೌರವ ಲಭಿಸಿದೆ. ದಿನಾಂಕ 31-01-2026 ರಂದು ನವದೆಹಲಿಯಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಏಷ್ಯಾ ಇಂಟರ್ ನ್ಯಾಷನಲ್ ಕಲ್ಚರ್ ರಿಸರ್ಚ್ ಯೂನಿವರ್ಸಿಟಿ ವತಿಯಿಂದ ಯಶವಂತ್ ಅವರಿಗೆ ಪ್ರತಿಷ್ಠಿತ ‘ಶಿಲ್ಪಕಲಾರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಅತ್ತೂರಿನ ಅತ್ಯುತ್ತ ಆಚಾರ್ಯ ಹಾಗೂ ರತ್ನಆಚಾರ್ಯ ದಂಪತಿಗಳ ಪುತ್ರನಾದ ಯಶವಂತ್ ಆಚಾರ್ಯ, ಸಾಂಪ್ರದಾಯಿಕ ಶಿಲ್ಪಕಲೆಯಲ್ಲಿ ಆಧುನಿಕ ನೈಪುಣ್ಯತೆಯನ್ನು ಅಳವಡಿಸಿಕೊಂಡು ಕಲ್ಲಿನಲ್ಲಿ ಕಲಾಕೃತಿಗಳನ್ನು ಕೆತ್ತುವ ಮೂಲಕ ವಿಶೇಷ ಛಾಪನ್ನು ಮೂಡಿಸಿದ್ದಾರೆ. ಇವರ ಕಲಾ ಸೇವೆಯನ್ನು ಮತ್ತು ಶಿಲ್ಪಕಲೆಯಲ್ಲಿನ ನಿರಂತರ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಈ ಐತಿಹಾಸಿಕ ಸಾಧನೆಗೆ ನೀರೆ ಬೈಲೂರಿನ ಶ್ರೀ ವಿಶ್ವಕರ್ಮ ಬ್ರಾಹ್ಮಣ ಸಮಾಜ ಸೇವಾ ಸಂಘವು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದು, ಇವರ ಕಲಾ ಸೇವೆ ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಬೆಳಗಲಿ ಎಂದು ಹಾರೈಸಿದೆ.
































