
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಟ್ರೋಲ್‌ಗೆ ತುತ್ತಾಗಿದ್ದಾರೆ. ನಟನ ತಾಯಿ ಎಂಬ ಕಾರಣಕ್ಕಲ್ಲ, ಅವರು ಹೊಸ ಸಿನಿಮಾ ನಿರ್ಮಾಣದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಶೈಲಿಯೇ ಈ ಟ್ರೋಲ್‌ಗಳಿಗೆ ಕಾರಣವಾಗಿದೆ.
ಯಶ್ ತಾಯಿ ಪುಷ್ಪರವರು ಅವರದೇ ನಿರ್ಮಾಣ ಸಂಸ್ಥೆಯಲ್ಲಿ ‘ಕೊತ್ತಲವಾಡಿ’ ಎಂಬ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಆದರೆ ಮಾಧ್ಯಮಗಳ ಎದುರು ಮಾತನಾಡಿದ ಧಾಟಿ ನೆಟ್ಟಿಗರಿಗೆ ದಿಗ್ಗಜ ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್ ಅವರನ್ನು ನೆನಪಿಸಿದೆ. ಹಲವರು “ಪಾರ್ವತಮ್ಮನವರಿಗೆ ನೂರಾರು ಸಿನಿಮಾಗಳ ಅನುಭವವಿತ್ತು, ಆದರೆ ಯಾವತ್ತೂ ಇಷ್ಟು ದರ್ಪವಿರಲಿಲ್ಲ. ಆದರೆ ಪುಷ್ಪ ಮೇಡಂರವರಿಗೆ ಪ್ರಥಮ ಸಿನಿಮಾದ ಮೊದಲೇ ಇಂತಹ ಧಿಮಾಕು!” ಎಂದು ಕಿಡಿಕಾರಿದ್ದಾರೆ.
ಮಾಧ್ಯಮದ ಪ್ರಶ್ನೆಗೆ ಪುಷ್ಪ ಪ್ರತಿಕ್ರಿಯಿಸುತ್ತಾ – “ಯಶ್ ಜೊತೆ ನಾನು ಮಾತನಾಡಿಲ್ಲ. ಅವನು ನೋಡಿದರೆ ಸಿನಿಮಾ ಹಿಟ್ ಆಗಲ್ಲ. ನನ್ನ ಸೊಸೆ ರಾಧಿಕಾ ಪಂಡಿತ್ ಅಮೆರಿಕಾದಲ್ಲಿದ್ದಾರೆ. ನಾವು ಗೌಡರು, ನೇರವಾಗೇ ಮಾತನಾಡುತ್ತೇವೆ” ಎಂದರು. ಈ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಒರಟು ಶೈಲಿಯಾಗಿದೆ ಎಂಬ ಟೀಕೆಗೀಡಾಗಿದೆ.
ಪಾರ್ವತಮ್ಮ ರಾಜಕುಮಾರ್ ಅವರು ನೂರಾರು ಚಿತ್ರಗಳನ್ನು ನಿರ್ಮಿಸಿ ಕನ್ನಡ ಚಿತ್ರರಂಗಕ್ಕೆ ಮಹತ್ತರ ಕೊಡುಗೆ ನೀಡಿದ್ದರು. ಆದರೂ ಅವರಿಗೆ ಸ್ವಲ್ಪವೂ ಮಾತಿನಲ್ಲಿ ಒರಟುತನ ಇರ್ಲಿಲ್ಲ. ಆದರೆ ಪುಷ್ಪರವರ ಒರಟಾದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹಸಿರು ತಿರಸ್ಕಾರವನ್ನು ಎದುರಿಸುತ್ತಿವೆ.