
ಉಡುಪಿ: ಯಕ್ಷ ಮಿತ್ರರು ದೊಂಡೇರಂಗಡಿಯ ಸದಸ್ಯರು ಸರ್ಕಾರಿ ಪ್ರಾಢಶಾಲೆ ಕುಕ್ಕುಜೆಯ 169 ವಿದ್ಯಾರ್ಥಿಗಳಿಗೆ ಸುಮಾರು 13 ಸಾವಿರ ವೆಚ್ಚದಲ್ಲಿ ಐಡಿ ಕಾರ್ಡ್ ಅನ್ನು ವಿತರಿಸಿದರು. ಈ ಸಂದರ್ಭದಲ್ಲಿ ಕುಕ್ಕುಜೆ ಕಾಲೇಜಿನ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ದಯಾನಂದ ಹೆಗ್ಡೆ,ಕಡ್ತಲ ಗ್ರಾ.ಪಂ ಅಧ್ಯಕ್ಷ ಸುಕೇಶ್ ಹೆಗ್ಡೆ,ಸದಸ್ಯ ದೀಕ್ಷಿತ್ ಶೆಟ್ಟಿ,ಪ್ರಾಢಶಾಲೆಯ ಮುಖ್ಯ ಶಿಕ್ಷಕ ಬಾಬುರಾಯ ಕಾಮತ್,ಹಾಗೂ ಯಕ್ಷ ಮಿತ್ರರಾದ ಅರುಣ್ ಶೆಟ್ಟಿ,ಸುಭಾಸ್ ಪೂಜಾರಿ ಪನೋಲು,ಅಶೋಕ್ ಶೆಟ್ಟಿ ಮತ್ತು ಶಾಲೆ ಯ ಅಧ್ಯಾಪಕರು ಉಪಸ್ಥಿತರಿದ್ದರು.