
ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳದ ಹೆಸರು ಹಾಳು ಮಾಡಲು ವ್ಯವಸ್ಥಿತ ಷಡ್ಯಂತ್ರಗಳು ನಡೆಯುತ್ತಿವೆ ಎಂಬ ಆರೋಪಗಳ ಬೆನ್ನಲ್ಲೇ, ಧರ್ಮಸಂರಕ್ಷಣೆಗಾಗಿ ಧರ್ಮಸ್ಥಳದ ಪ್ರವಚನ ಮಂಟಪದಲ್ಲಿ ವಿಶೇಷ ಯಾಗವೊಂದು ನಡೆಯಿತು. ಮಹರ್ಷಿ ಆನಂದ ಗುರೂಜಿಯವರ ನೇತೃತ್ವದಲ್ಲಿ ಈ ಯಾಗವನ್ನು ನಡೆಸಲಾಯಿತು.
ಈ ಯಾಗದಲ್ಲಿ 3,000 ಕ್ಕಿಂತಲೂ ಹೆಚ್ಚು ಭಕ್ತರು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಆನಂದ ಗುರೂಜಿಯವರು, “ಪೂಜ್ಯರೇ, ನಿಮ್ಮ ಜೊತೆ ನಾವು ಧರ್ಮಸ್ಥಳದ ಭಕ್ತರಿದ್ದೇವೆ. ಪುಣ್ಯಕ್ಷೇತ್ರದ ಹೆಸರನ್ನು ಹಾಳು ಮಾಡಲು ನಾವು ಎಂದಿಗೂ ಬಿಡುವುದಿಲ್ಲ” ಎಂದು ದೃಢವಾಗಿ ತಿಳಿಸಿದರು.
ಕ್ಷೇತ್ರದ ವಿರುದ್ಧ ನಡೆಯುತ್ತಿರುವ ಅಪಪ್ರಚಾರದ ಕುರಿತು ಭಕ್ತರಲ್ಲಿ ಆತಂಕ ಹೆಚ್ಚಿರುವ ಸಂದರ್ಭದಲ್ಲಿ ನಡೆದ ಈ ಯಾಗವು, ಭಕ್ತರಲ್ಲಿ ನಂಬಿಕೆ ಮತ್ತು ಧೈರ್ಯವನ್ನು ಮೂಡಿಸುವ ಪ್ರಯತ್ನವಾಗಿದೆ.