spot_img

ಜಗತ್ತಿನ ಅತ್ಯುನ್ನತ ಹವಾಮಾನ ಮುನ್ಸೂಚನಾ ವ್ಯವಸ್ಥೆ: ಕೇಂದ್ರ ಸರ್ಕಾರದಿಂದ “ಭಾರತ್ ಫೋರ್‌ಕಾಸ್ಟಿಂಗ್ ಸಿಸ್ಟಂ” ಅನಾವರಣ

Date:

spot_img

ಹೊಸದಿಲ್ಲಿ: ಭಾರತದ ಹವಾಮಾನ ಮುನ್ಸೂಚನೆ ಕ್ಷೇತ್ರದಲ್ಲಿ ಬೃಹತ್ ತಂತ್ರಜ್ಞಾನ ಯುಗದ ಪ್ರಾರಂಭವಾಗಿದ್ದು, ಕೇಂದ್ರ ಸರ್ಕಾರ ಸೋಮವಾರ ನೂತನ “ಭಾರತ್ ಫೋರ್‌ಕಾಸ್ಟಿಂಗ್ ಸಿಸ್ಟಂ” (Bharat Forecasting System – BFS) ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಲಿದೆ.

ಈ ಅತ್ಯಾಧುನಿಕ ವ್ಯವಸ್ಥೆಯನ್ನು ಪುಣೆಯ “ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೀಟಿಯರಾಲಜಿ” (IITM) ಅಭಿವೃದ್ಧಿಪಡಿಸಿದ್ದು, ದೇಶದ ಹವಾಮಾನ ಸಂಶೋಧನೆ ಹಾಗೂ ಮುನ್ಸೂಚನೆ ವ್ಯವಸ್ಥೆಗೆ ಹೊಸ ದಿಕ್ಕು ನೀಡಲಿದೆ. ಇದರಲ್ಲಿ 66×6 ಕಿ.ಮೀ. ರೆಸಲ್ಯೂಶನ್ ಗ್ರಿಡ್ ಬಳಕೆಯಾಗುತ್ತಿದ್ದು, ಹಳೆಯ 12×12 ಕಿ.ಮೀ. ರೆಸಲ್ಯೂಶನ್‌ಗಿಂತ ಮುನ್ಸೂಚನೆಗಳನ್ನು ಹೆಚ್ಚು ನಿಖರವಾಗಿ ನೀಡಲಿದೆ.

ಈ ವ್ಯವಸ್ಥೆಯ ಭಾಗವಾಗಿರುವ “ಆರ್ಕ್” ಎಂಬ ಸೂಪರ್ ಕಂಪ್ಯೂಟರ್‌ನಲ್ಲಿ 11.77 ಪೆಟಾಫ್ಲಾಪ್ ಪ್ರೊಸೆಸಿಂಗ್ ಶಕ್ತಿ ಮತ್ತು 33 ಪೆಟಾಬೈಟ್‌ಗಳ ದತ್ತಾಂಶ ಸಂಗ್ರಹ ಸಾಮರ್ಥ್ಯವಿದೆ. ಹೀಗಾಗಿ ಹಿಂದಿನ “ಪ್ರತ್ಯುಷಾ ” ಸೂಪರ್ ಕಂಪ್ಯೂಟರ್‌ಗೆ ಬೇಕಾಗುವ 10 ಗಂಟೆಗಳ ಬದಲಿಗೆ ಕೇವಲ 4 ಗಂಟೆಗಳಲ್ಲಿ ದತ್ತಾಂಶ ವಿಶ್ಲೇಷಣೆ ಪೂರೈಸುವ ಸಾಮರ್ಥ್ಯ ಈ ವ್ಯವಸ್ಥೆಗೆ ಇದೆ.

ದೇಶದಾದ್ಯಂತ 40 ಡಾಪ್ಲರ್ ಹವಾಮಾನ ರಾಡಾರ್‌ಗಳ ಜಾಲದ ಮೂಲಕ ಸಂಗ್ರಹವಾಗುವ ಮಾಹಿತಿ ಬಳಸಿ, BFS ನಿಖರ ಹವಾಮಾನ ಮುನ್ಸೂಚನೆಗಳನ್ನು ನೀಡಲಿದ್ದು, ಪ್ರಕೃತಿ ವಿಕೋಪಗಳು, ಕೃಷಿ ನಿರ್ವಹಣೆ ಹಾಗೂ ಸಾರ್ವಜನಿಕ ಎಚ್ಚರಿಕೆಗಾಗಿ ಇದು ಭವಿಷ್ಯದಲ್ಲಿ ಬಹುಮುಖ್ಯ ಪಾತ್ರ ವಹಿಸಲಿದೆ.

ಭಾರತದ ಹವಾಮಾನ ವಿಜ್ಞಾನ ಕ್ಷೇತ್ರಕ್ಕೆ ಇದು ಮೈಲಿಗಲ್ಲಾಗಲಿದ್ದು, ಜಾಗತಿಕ ಮಟ್ಟದಲ್ಲಿಯೇ ಅತ್ಯಂತ ನಿಖರ ಮುನ್ಸೂಚನೆ ನೀಡುವ ವ್ಯವಸ್ಥೆಯಾಗಿ ಗುರುತಿಸಿಕೊಳ್ಳಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

“ರಾಹುಲ್ ಗಾಂಧಿಯವರ ತ್ಯಾಗ ದೇಶದ ಯುವಕರಿಗೆ ಮಾದರಿಯಾಗಬೇಕು”: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಲೋಕಸಭೆ ವಿಪಕ್ಷ ನಾಯಕ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಕಷ್ಟ ಮತ್ತು ತ್ಯಾಗ ದೇಶದ ಯುವಕರಿಗೆ ಮಾದರಿಯಾಗಬೇಕು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.

ಇತಿಹಾಸ ನಿರ್ಮಿಸಿದ ದಿವ್ಯಾ ದೇಶಮುಖ್: ಮಹಿಳಾ ಚೆಸ್ ವಿಶ್ವಕಪ್ ಗೆದ್ದು ಗ್ರಾಂಡ್‌ಮಾಸ್ಟರ್ ಪಟ್ಟಕ್ಕೆ!

ಜಾರ್ಜಿಯಾದ ಬಟುಮಿಯಲ್ಲಿ ಇಂದು (ಜುಲೈ 28, 2025) ನಡೆದ FIDE ಮಹಿಳಾ ವಿಶ್ವಕಪ್ 2025 ರಲ್ಲಿ, ನಾಗಪುರದ 19 ವರ್ಷದ ಪ್ರತಿಭಾವಂತ ಚೆಸ್ ಆಟಗಾರ್ತಿ ದಿವ್ಯಾ ದೇಶಮುಖ್ ಭರ್ಜರಿ ಗೆಲುವು ಸಾಧಿಸಿ ಇತಿಹಾಸ ನಿರ್ಮಿಸಿದ್ದಾರೆ.

ಆ್ಯಸಿಡಿಟಿ, ಮಲಬದ್ಧತೆ, ಅಲ್ಸರ್‌ಗೆ ರಾಮಬಾಣ ‘ಓಂಕಾಳು’: ಇಲ್ಲಿದೆ ಹಲವು ಆರೋಗ್ಯ ಪ್ರಯೋಜನಗಳು!

ಓಂಕಾಳು ಅಡುಗೆಮನೆಯಲ್ಲಿ ಸಾಮಾನ್ಯವಾಗಿ ಬಳಸುವ ಮಸಾಲೆಯಾಗಿದ್ದರೂ, ಇದರ ಸೇವನೆಯಿಂದ ಹತ್ತು ಹಲವು ಆರೋಗ್ಯ ಪ್ರಯೋಜನಗಳಿವೆ.

ಧರ್ಮಸ್ಥಳ, ಉಡುಪಿ, ಕೊಲ್ಲೂರು ಕ್ಷೇತ್ರಗಳ ಬಗ್ಗೆ ವಿವಾದಾತ್ಮಕ ವಿಡಿಯೋ : ಇಬ್ಬರು ಕೇರಳ ಯೂಟ್ಯೂಬರ್‌ಗಳ ವಿರುದ್ಧ ಪ್ರಕರಣ ದಾಖಲು!

ಕರಾವಳಿಯ ಪ್ರಮುಖ ಧಾರ್ಮಿಕ ಕ್ಷೇತ್ರಗಳಾದ ಧರ್ಮಸ್ಥಳ, ಉಡುಪಿ, ಮತ್ತು ಕೊಲ್ಲೂರು ಬಗ್ಗೆ ಅವಹೇಳನಕಾರಿ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿದ ಕೇರಳದ ಇಬ್ಬರು ವ್ಯಕ್ತಿಗಳ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.