
ಗುಜರಾತ್ : ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ, ಇಂದು (ಶನಿವಾರ, ಮಾರ್ಚ್ 8) ಪ್ರಧಾನಿ ನರೇಂದ್ರ ಮೋದಿ ಅವರ ಗುಜರಾತ್ ಪ್ರವಾಸಕ್ಕೆ ಸಂಪೂರ್ಣ ಮಹಿಳಾ ಪೊಲೀಸ್ ಪಡೆ ಭದ್ರತೆ ಒದಗಿಸಲು ಸಜ್ಜಾಗಿದೆ.
ವಾಂರಿಯ ವನ್ಸಿ ಬೋರ್ಸಿ ಗ್ರಾಮದಲ್ಲಿ ನಡೆಯುವ “ಲಖ್‌ಪತಿ ದೀದಿ ಸಮ್ಮೇಳನ” ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ. ಈ ವೇಳೆ ಹೆಲಿಪ್ಯಾಡ್‌ನಿಂದ ಕಾರ್ಯಕ್ರಮ ಸ್ಥಳದವರೆಗೆ ಸಂಪೂರ್ಣ ಮಹಿಳಾ ಪೊಲೀಸ್ ಸಿಬ್ಬಂದಿಯೇ ಭದ್ರತೆ ಒದಗಿಸಲಿದ್ದಾರೆ ಎಂದು ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಹರ್ಷ ಸಾಂಘ್ವಿ ತಿಳಿಸಿದ್ದಾರೆ.
ಈ ವಿಶೇಷ ಭದ್ರತಾ ವ್ಯವಸ್ಥೆಯಲ್ಲಿ 2100 ಮಹಿಳಾ ಕಾನ್‌ಸ್ಟೇಬಲ್‌ಗಳು, 187 ಸಬ್‌ಇನ್ಸ್‌ಪೆಕ್ಟರ್‌ಗಳು, 61 ಪೊಲೀಸ್ ಇನ್ಸ್‌ಪೆಕ್ಟರ್‌ಗಳು, 16 ಡಿಎಸ್ಪಿಗಳು, 5 ಎಸ್ಪಿಗಳು, 1 ಐಜಿಪಿ ಹಾಗೂ 1 ಹೆಚ್ಚುವರಿ ಡಿಜಿಪಿ ಹುದ್ದೆಯ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಗುಜರಾತ್ ಪೊಲೀಸ್ ಇಲಾಖೆ ಮಹಿಳಾ ದಿನದ ವಿಶೇಷ ಒಡಂಬಡಿಕೆಗೆ ತಕ್ಕಂತೆ ಈ ವಿಭಿನ್ನ ಉಪಕ್ರಮ ಕೈಗೊಂಡಿದೆ.