
ಕಾರ್ಕಳ : “ಮಹಿಳಾ ಸ್ನೇಹಿ”ನೀರೆ-ಕಣಜಾರು ಗ್ರಾಮ ಪಂಚಾಯತ್ ನ ನೂತನ ಕಛೇರಿ ಕಟ್ಟಡ , ಗ್ರಾಮಸೌಧದ ಕಟ್ಟಡದ ಉದ್ಘಾಟನಾ ಕಾರ್ಯಕ್ರಮವು ಸೆಪ್ಟೆಂಬರ್ 12ರಂದು ಅತಿ ವಿಜೃಂಭಣೆಯಿಂದ ನೆರವೇರಿತು.

“ಮಹಿಳಾ ಸ್ನೇಹಿ”ನೀರೆ-ಕಣಜಾರು ಗ್ರಾಮ ಪಂಚಾಯತ್ ನ ನೂತನ ಕಛೇರಿ ಕಟ್ಟಡ , ಗ್ರಾಮಸೌಧದ ಕಟ್ಟಡದ ಉದ್ಘಾಟನೆಯನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರವರು ನಡೆಸಿದರು. ಸಭಾ ಕಾರ್ಯಕ್ರಮವು ಶಾಸಕರಾದ ಸುನೀಲ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಸದ ಕೋಟ ಶ್ರೀನಿವಾಸ ಪೂಜಾರಿ , ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ,ಕಾಂಗ್ರೆಸ್ ಮುಖಂಡ ಉದಯ ಕುಮಾರ್ ಶೆಟ್ಟಿ ಮುನಿಯಾಲು , ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ., ಎಸ್ಪಿ ಹರಿರಾಂ ಶಂಕರ್, ತಹಶೀಲ್ದಾರ್ ಪ್ರದೀಪ್ ಆರ್., ತಾ. ಪಂ. ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ರಾವ್ ಎಂ. ವಿ., ತಾ ಪಂ. ಆಡಳಿತ ಅಧಿಕಾರಿ ಸುಬ್ರಹ್ಮಣ್ಯ ಶೆಟ್ಟಿ, ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಜಿತ್ ಹೆಗ್ಡೆ, ಎಂ.ಆರ್. ಪಿ. ಆರ್. ಮಂಗಳೂರು ಇದರ ಗ್ರೂಪ್ ಜನರಲ್ ಮ್ಯಾನೇಜರ್ ಕೃಷ್ಣ ಹೆಗ್ಡೆ ಮಿಯ್ಯಾರು, ರಾಜಾಪುರ ಸಾರಸ್ವತ ಕ್ರೆಡಿಟ್ ಕೋ – ಆಪರೇಟಿವ್ ಸೊಸೈಟಿ ಕಾರ್ಕಳ ಇದರ ಅಧ್ಯಕ್ಷ ರವೀಂದ್ರ ಪ್ರಭು ಕಡಾರಿ, ಅಡಪಾಡಿ ಪಳ್ಳಿ ಶ್ರೀ ಉಮಾಮಹೇಶ್ವರ ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ಪುಂಡಲೀಕ ನಾಯಕ್, ಗೀತಾಂಜಲಿ ಸಿಲ್ಕ್ಸ್ ಮಾಲಕ ಸಂತೋಷ್ ವಾಗ್ಲೆ , ಕಣಜಾರು ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಸುಧೀರ್ ಹೆಗ್ಡೆ, ಸಿಎ ಚಂದನ್ ಶೆಟ್ಟಿ, ರಮೇಶ್ ನಾಯಕ್, ಮೊಹಮ್ಮದ್ ನಿಜಾಮುದ್ದೀನ್ ಬಾಖದಿ, ದಿನೇಶ್ಚಂದ್ರ ಹೆಗ್ಡೆ ನೀರೆ, ಸುಮಿತ್ ಶೆಟ್ಟಿ ಕೌಡೂರು, ಹರಿಶ್ಚಂದ್ರ ಶೆಟ್ಟಿ ಕೌಡೂರು, ಪ್ರಶಾಂತ್ ಶೆಟ್ಟಿ ಬೈಲೂರು, ರಾಮಕೃಷ್ಣ ಶೆಟ್ಟಿ, ದಿಲೀಪ್ ಸಂಜೀವ ಶೆಟ್ಟಿ, ವಕೀಲ ಸದಾನಂದ ಸಾಲಿಯಾನ್ ಸೇರಿದಂತೆ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ನೂತನ ಕಛೇರಿ ಕಟ್ಟಡ , ಗ್ರಾಮಸೌಧದ ಕಟ್ಟಡದ ನಿರ್ಮಾಣದಲ್ಲಿ ಸಹಕರಿಸಿದ ಸಹೃದಯಿ ದಾನಿಗಳಿಗೆ ಹಾಗೂ ದಿನಾಂಕ 12/09/2025 ರಂದು ಜರುಗಿದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಅಭೂತಪೂರ್ವವಾಗಿ ಯಶಸ್ವಿಗೊಳಿಸಲು ಕಾರಣೀಕರ್ತರಾದ ನೀರೆ ಕಣಜಾರು ಗ್ರಾಮಸ್ಥರಿಗೆ, ವಿವಿಧ ಸಂಘ ಸಂಸ್ಥೆಯ ಪ್ರತಿನಿಧಿಗಳಿಗೆ, ಸಂಜೀವಿನಿ ಒಕ್ಕೂಟದ ಸದಸ್ಯರುಗಳಿಗೆ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ, ಉಡುಪಿ ಜಿಲ್ಲಾ, ಕಾರ್ಕಳ ತಾಲೂಕು, ಹಾಗೂ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿಯ ವಿವಿದ ಸ್ತರದ ಜನಪ್ರತಿನಿಧಿಗಳಿಗೆ , ಅಧಿಕಾರಿಗಳಿಗೆ,ಪೊಲೀಸ್ ಠಾಣಾಧಿಕಾರಿಗಳಿಗೆ , ದೃಶ್ಯ ಮಾಧ್ಯಮ ಹಾಗೂ ಪತ್ರಿಕಾ ಮಾಧ್ಯಮದವರಿಗೆ, ಅರಕ್ಷಕ ಬಂಧುಗಳಿಗೆ, ದಾನಿಗಳಿಗೆ, ಹಿತೈಷಿಗಳಿಗೆ ಹಾಗೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ತಮಗೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇವೆ ಎಂದು ಅಧ್ಯಕ್ಷರಾದ ಸಚ್ಚಿದಾನಂದ ಎಸ್ ಪ್ರಭು ಕಣಜಾರು , ಉಪಾಧ್ಯಕ್ಷರು , ಸರ್ವ ಸದಸ್ಯರು , ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ನೀರೆ – ಕಣಜಾರು ಗ್ರಾಮ ಪಂಚಾಯತ್, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.