
ಮೀರತ್ : ಮೀರತ್‌ನ ಸಿಕಂದರ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತಿಯನ್ನು ಕೊಲೆ ಮಾಡಿ ಆರು ತುಂಡುಗಳಾಗಿ ಕತ್ತರಿಸಿ ಎಸೆದ ಹೃದಯ ವಿದ್ರಾವಕ ಘಟನೆ ನಡೆದಿದೆ. 44 ವರ್ಷದ ಮಾಯಾದೇವಿ ತನ್ನ ಪ್ರಿಯಕರ ಹಾಗೂ ಇನ್ನಿಬ್ಬರ ಸಹಾಯದಿಂದ ತನ್ನ ಪತಿಯನ್ನು ಕೊಲೆ ಮಾಡಿ, ಅವನ ದೇಹದ ಭಾಗಗಳನ್ನು ವಿಭಜಿಸಿ ವಿವಿಧ ಸ್ಥಳಗಳಲ್ಲಿ ಎಸೆದಿದ್ದಾಳೆ.
ಮಾಯಾದೇವಿ ತನ್ನ ಪತಿಯ ಗುರುತು ಮರೆಮಾಡಲು ದೇಹದ ಭಾಗಗಳನ್ನು ಪಾಲಿಥಿನ್‌ಗಳಲ್ಲಿ ಸುತ್ತಿ ವಿವಿಧ ಸ್ಥಳಗಳಲ್ಲಿ ಎಸೆದಿರುವುದನ್ನು ಪೊಲೀಸರು ತನಿಖೆಯಲ್ಲಿ ಪತ್ತೆ ಹಚ್ಚಿದರು. ದೇಹದ ಭಾಗಗಳು ಶನಿವಾರ ಖರೀದ್ ಗ್ರಾಮದಲ್ಲಿನ ಹೊಲದಲ್ಲಿ ಕಂಡುಬಂದವು.
ಮಾಯಾ ದೇವಿಯ ಪತಿಯನ್ನು 62 ವರ್ಷದ ನಿವೃತ್ತ ಸೇನಾ ಸಿಬ್ಬಂದಿ ದೇವೇಂದ್ರ ಕುಮಾರ್ ಎಂದು ಗುರುತಿಸಲಾಗಿದೆ. ಮೊದಲು, ಮಾಯಾ ದೇವಿ ತನ್ನ ಪತಿಯನ್ನು ನಾಪತ್ತೆಯಾಗಿದ್ದಾನೆ ಎಂದು ಹೇಳಿ, ಬಲ್ಲಿಯಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಆದರೆ, ಅವರ ಮಗಳು ಪೊಲೀಸ್ ಠಾಣೆಗೆ ಬಂದು ನೇರವಾಗಿ ಆರೋಪ ಮಾಡಿ, ಮಾಯಾ ದೇವಿಯೇ ತನ್ನ ತಂದೆಯನ್ನು ಕೊಲೆ ಮಾಡಿದ್ದಾಗಿ ಹೇಳಿದ ನಂತರ ಪ್ರಕರಣವನ್ನು ಮತ್ತಷ್ಟು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಮಾಯಾ ದೇವಿಯನ್ನು ಬಂಧಿಸಿ, ಅವಳ ವಿರುದ್ಧ ಕೊಲೆ ಸಂಬಂಧಿ ಸೆಕ್ಷನ್‌ಗಳನ್ನು ಅಳವಡಿಸಿ ತನಿಖೆ ಮುಂದುವರಿಸಿದ್ದಾರೆ.