
ಪುಣೆ:ಕೆಲಸ ಮಾಡುವ ಕಚೇರಿಗಳಲ್ಲಿ ಕೆಲವರು ಇಲ್ಲ-ಸಲ್ಲದ ಕಾರಣಗಳನ್ನು ಉಲ್ಲೇಖಿಸಿ ರಜೆ ಪಡೆಯುವುದನ್ನು ನಾವು ನೋಡಿರುವುದು ಸಾಮಾನ್ಯ. “ಉಷಾರಿಲ್ಲ ಸರ್”, “ಊರಿಗೆ ಹೋಗಬೇಕು”, “ತುಂಬಾ ಕೆಲಸ ಇದೆ” ಎಂಬುವಂತಹ ನೆಪಗಳ ಪೈಕಿ, ಇತ್ತೀಚೆಗೆ ಪುಣೆಯಲ್ಲೊಬ್ಬ ಮಹಿಳೆ ರಜೆಗಾಗಿ ಮಡಿದ ಮೇಕ್ಅಪ್ ವಿನೂತನ ಚರ್ಚೆಗೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪುಣೆಯಲ್ಲಿ ಮೇಕಪ್ ಆರ್ಟಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯೊಬ್ಬರು, ಮುಖದ ಮೇಲೆ ನಕಲಿ ಅಪಘಾತದ ಗಾಯದಂತೆ ಮೇಕಪ್ ಮಾಡಿ, ಅದನ್ನು ಗುರುತಿಸಲು ಹೊಲಿಗೆ ಹಾಕಿದ ರೀತಿಯಲ್ಲಿ ತೋರಿಸಿ ರಜೆಗಾಗಿ ತಯಾರಾದ ರೀತಿಯ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
ಈ ಮೇಕಪ್ ಕೌಶಲ್ಯದಲ್ಲಿ, ಗಾಯ ತೀವ್ರವಾದಂತೆ ಕಾಣುವ ಮತ್ತು ಗುಣಮುಖವಾಗುತ್ತಿರುವ ಹಂತಗಳನ್ನು ಬಹಳ ನೈಜವಾಗಿ ರೂಪಿಸಿರುವುದು ಗಮನ ಸೆಳೆಯುತ್ತಿದೆ. ಕಚೇರಿಗೆ ಹೋಗುವಾಗ ಯಾರೂ ಗುರುತಿಸದಂತೆ ಹೇಗೆ ಕಾಣಬೇಕು ಎಂಬುದಕ್ಕೂ ಪ್ರಾತ್ಯಕ್ಷಿಕೆ ನೀಡಿರುವ ಆ ವಿಡಿಯೋ, ನೆಟ್ಟಿಗರು ನಗುವ ಪ್ರತಿಕ್ರಿಯೆಗೂ, ಚಿಂತನೆಗೂ ಕಾರಣವಾಗಿದೆ.
ಸಾಮಾನ್ಯತಃ ಮೇಕಪ್ ಸೌಂದರ್ಯ ಹೆಚ್ಚಿಸುವ ಸಲುವಾಗಿ ಬಳಸಲಾಗುತ್ತದೆ. ಆದರೆ ಈ ಮಹಿಳೆ ಅದನ್ನು ಅಪಘಾತದ ನಟನೆಯಾಗಿ ಬಳಸಿದ ವಿಧಾನದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾವಿರಾರು ಲೈಕ್ಸ್ ಹಾಗೂ ಕಾಮೆಂಟ್‌ಗಳೊಂದಿಗೆ ಟ್ರೆಂಡ್ ಆಗುತ್ತಿದೆ.