
ಕೃಷ್ಣಗಿರಿ (ತಮಿಳುನಾಡು) : “ನೀನು ಸುಂದರಿಯಲ್ಲ” ಎಂಬ ಪತಿಯ ಟೀಕೆಗೆ ತೀವ್ರ ಕೋಪಗೊಂಡ ಪತ್ನಿಯೊಬ್ಬಳು, ತನ್ನ ಪತಿಗೆ ಬೆಂಕಿ ಹಚ್ಚಿ ಕೊಂದ ಅಮಾನುಷ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ನಡೆದಿದೆ.
ಮೃತರನ್ನು ರಂಗಸ್ವಾಮಿ (47) ಎಂದು ಗುರುತಿಸಲಾಗಿದೆ. ಆರೋಪಿಯಾಗಿರುವ ಪತ್ನಿಯ ಹೆಸರು ಕವಿತಾ (44). ಈ ದಂಪತಿಗೆ ಮೂರು ಮಕ್ಕಳಿದ್ದು, ಒಬ್ಬ ಮಗಳಿಗೆ ಈಗಾಗಲೇ ವಿವಾಹವಾಗಿದ್ದು, ಉಳಿದ ಇಬ್ಬರು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಈ ಘಟನೆ ಜೂನ್ 9ರಂದು ನಡೆದಿದ್ದು, ಮನೆಯಲ್ಲಿಯೇ ಇಬ್ಬರ ನಡುವೆ ಮಾತಿನ ಚಕಮಕಿ ನಡೆದ ಬೆನ್ನಲ್ಲೇ ಕವಿತಾ ತನ್ನ ಪತಿಗೆ ಬೆಂಕಿ ಹಚ್ಚಿದ್ದಾಳೆ. ಘಟನೆ ನೋಡಿದ ನೆರೆಹೊರೆಯವರು ತಕ್ಷಣ ರಂಗಸ್ವಾಮಿಯನ್ನು ಅಸ್ಪತ್ರೆಗೆ ಸೇರಿಸಿದ್ದರೂ, ಜೂನ್ 11ರಂದು ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವಿಗೀಡಾಗಿದ್ದಾರೆ.
ಈ ಮಧ್ಯೆ, ಕವಿತಾಳನ್ನು ತಿರುಪತಿಯಲ್ಲಿ ಇರುವುದಾಗಿ ಪತ್ತೆಹಚ್ಚಿದ ಪೊಲೀಸರು ಜೂನ್ 13ರಂದು ಬಂಧಿಸಿದ್ದಾರೆ. ಘಟನೆಯ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.