ಮದ್ಯ, ತಂಬಾಕು, ತಂಪು ಪಾನೀಯಗಳ ಬೆಲೆ ಶೇ.50ರಷ್ಟು ಹೆಚ್ಚಳಕ್ಕೆ WHO ಕರೆ: ಕುಡುಕರಿಗೆ ಮತ್ತೊಂದು ಶಾಕ್!

Date:

spot_img

ಕರ್ನಾಟಕದಲ್ಲಿ ಮದ್ಯದ ಬೆಲೆ ಈಗಾಗಲೇ ಗಣನೀಯವಾಗಿ ಏರಿಕೆ ಕಂಡಿದೆ. ಕಳೆದ ಎರಡು ವರ್ಷಗಳಲ್ಲಿ ಮೂರು ಬಾರಿ ಬೆಲೆ ಹೆಚ್ಚಳವಾಗಿದ್ದು, ಬಿಯರ್ ದರವೂ ಏರಿಕೆಯಾಗಿದೆ. ಇದರ ನಡುವೆ, ಕೇವಲ ಕರ್ನಾಟಕ ಮಾತ್ರವಲ್ಲದೆ, ಭಾರತವೂ ಸೇರಿದಂತೆ ವಿಶ್ವದಾದ್ಯಂತ ಮದ್ಯ, ತಂಬಾಕು ಹಾಗೂ ತಂಪು ಪಾನೀಯಗಳ ಬೆಲೆಯನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸುವ ಪ್ರಸ್ತಾವನೆಯೊಂದನ್ನು ವಿಶ್ವ ಆರೋಗ್ಯ ಸಂಸ್ಥೆ (WHO) ಸಲ್ಲಿಕೆ ಮಾಡಿದೆ. ಈ ಬೆಳವಣಿಗೆ ಮದ್ಯಪ್ರಿಯರಿಗೆ ಮತ್ತೊಂದು ಆಘಾತ ನೀಡಲಿದೆ.

ಮದ್ಯದ ಬೆಲೆ ಏರಿಕೆಯ ಪರಿಣಾಮವಾಗಿ ಕರ್ನಾಟಕದಲ್ಲಿ ಮದ್ಯದ ಖರೀದಿ ಪ್ರಮಾಣ ಈಗಾಗಲೇ ಇಳಿಕೆ ಕಂಡಿದೆ. ಮದ್ಯ ಮಾರಾಟ ಕಂಪನಿಗಳು ಸಹ ಬೆಲೆ ಇಳಿಕೆಗೆ ಒತ್ತಾಯಿಸುತ್ತಿರುವ ನಡುವೆಯೇ, ಶೇ. 50 ರಷ್ಟು ಬೆಲೆ ಏರಿಕೆಯ ಪ್ರಸ್ತಾವನೆ ಮದ್ಯಪ್ರಿಯರಲ್ಲಿ ಭಾರೀ ತಲೆಬಿಸಿ ಸೃಷ್ಟಿಸಿದೆ.

ಸೆವಿಲ್ಲೆಯಲ್ಲಿ ಆಯೋಜಿಸಿದ್ದ UN ಅಭಿವೃದ್ಧಿಗಾಗಿ ಹಣಕಾಸು ಸಮ್ಮೇಳನದಲ್ಲಿ WHO ಈ ಪ್ರಸ್ತಾವನೆಯನ್ನು ಮುಂದಿಟ್ಟಿದೆ. ದೀರ್ಘಕಾಲದ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡುವ ಮತ್ತು ವಿಶ್ವಾದ್ಯಂತ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸುವ ಉದ್ದೇಶದಿಂದ ಈ ಶಿಫಾರಸ್ಸು ಮಾಡಲಾಗಿದೆ. ಮುಂದಿನ ಹತ್ತು ವರ್ಷಗಳಲ್ಲಿ ಹಂತ ಹಂತವಾಗಿ ಈ ಬೆಲೆ ಏರಿಕೆಗಳನ್ನು ಜಾರಿಗೆ ತರಬಹುದು ಎಂದು ಹೇಳಲಾಗಿದೆ.

ಹೆಚ್ಚುವರಿ ತೆರಿಗೆಗಳನ್ನು ಜಾರಿಗೆ ತರುವ ಮೂಲಕ, ಎಲ್ಲಾ ದೇಶಗಳಲ್ಲೂ ಸಕ್ಕರೆ ಕಾಯಿಲೆ (ಡಯಾಬಿಟಿಸ್) ಮತ್ತು ಕ್ಯಾನ್ಸರ್‌ನಂತಹ ಗಂಭೀರ ರೋಗಗಳನ್ನು ಕಡಿಮೆ ಮಾಡಬಹುದು ಎಂದು WHO ಅಭಿಪ್ರಾಯಪಟ್ಟಿದೆ. ಈ ಕ್ರಮದಿಂದಾಗಿ ಜಾಗತಿಕವಾಗಿ ಆರೋಗ್ಯ ಸಮಸ್ಯೆಗಳು ಕಡಿಮೆಯಾಗಲಿವೆ ಎಂದು ಸಂಸ್ಥೆ ನಂಬಿದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ, ಆರೋಗ್ಯ ತೆರಿಗೆಗಳು ಪರಿಣಾಮಕಾರಿ ಕ್ರಮಗಳಲ್ಲಿ ಒಂದಾಗಿವೆ. ಕೊಲಂಬಿಯಾ ಮತ್ತು ದಕ್ಷಿಣ ಆಫ್ರಿಕಾದಂತಹ ಕೆಲವು ದೇಶಗಳಲ್ಲಿ ಈಗಾಗಲೇ ಮದ್ಯ ಮತ್ತು ಸಕ್ಕರೆ ಅಂಶ ಇರುವ ತಂಪು ಪಾನೀಯಗಳ ಬೆಲೆ ಏರಿಕೆ ಮಾಡಲಾಗಿದ್ದು, ಅಲ್ಲಿ ಆರೋಗ್ಯ ಸಮಸ್ಯೆಗಳಲ್ಲಿ ಇಳಿಕೆಯಾಗಿರುವುದು ಕಂಡುಬಂದಿದೆ ಎಂದು ಉಲ್ಲೇಖಿಸಲಾಗಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ತುಳುವ ಮಹಾಸಭೆ ಉಡುಪಿ ಅಧ್ಯಕ್ಷರಾಗಿ ಉದಯ ಕುಮಾರ್ ಹೆಗ್ಡೆ ಆಯ್ಕೆ

ತುಳುವ ಮಹಾಸಭೆ ಇಂಟರ್ನ್ಯಾಷನಲ್ ಉಡುಪಿ ಜಿಲ್ಲಾ ಅಧ್ಯಕ್ಷರಾಗಿ ಯರ್ಲಪಾಡಿ ಉದಯ ಕುಮಾರ್ ಹೆಗ್ಡೆ ಆಯ್ಕೆಯಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ವಿಪ್ರ ಸ್ವಉದ್ಯಮ ಯೋಜನೆ: 2 ಲಕ್ಷ ಸಾಲಕ್ಕೆ ಅರ್ಜಿ ಆಹ್ವಾನ!

ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ ಸ್ವಉದ್ಯೋಗಕ್ಕೆ ಬಡ್ಡಿ ರಹಿತ/ಕಡಿಮೆ ಬಡ್ಡಿಯಲ್ಲಿ ಸಾಲ ಸೌಲಭ್ಯ. ಅರ್ಜಿ ಸಲ್ಲಿಸಲು 31-08-2026 ಕೊನೆ ದಿನ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಬೆಂಗಳೂರು ಇಡಿ ದಾಳಿ: ಐಸಿಸ್ ಫಂಡಿಂಗ್ ಆರೋಪದ ಮೇಲೆ 8 ಕಡೆ ಶೋಧ

ಬೆಂಗಳೂರಿನಲ್ಲಿ ಐಸಿಸ್ ಉಗ್ರ ಸಂಘಟನೆಗೆ ಹಣಕಾಸು ನೆರವು ನೀಡಿದ ಆರೋಪದ ಮೇಲೆ ಇಡಿ ಅಧಿಕಾರಿಗಳು 8 ಕಡೆ ದಾಳಿ ನಡೆಸಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಕರ್ನೂಲು ಬಳಿ ಭೀಕರ ಕಾರು ಅಪಘಾತ: ರವಿಚಂದ್ರ ಶೆಟ್ಟಿ ದುರ್ಮರಣ

ಆಂಧ್ರದ ಕರ್ನೂಲು ಬಳಿ ನಡೆದ ಕಾರು ಅಪಘಾತದಲ್ಲಿ ಮಂಗಳೂರಿನ ರವಿಚಂದ್ರ ಶೆಟ್ಟಿ ನಿಧನರಾಗಿದ್ದಾರೆ. ಮೂವರಿಗೆ ಗಾಯಗಳಾಗಿವೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.