
ಬೆಂಗಳೂರು: ಚಿತ್ರರಂಗದಿಂದ ಅಲ್ಪ ಕಾಲದ ಅಂತರವನ್ನು ಪಡೆದಿರುವ ಮೋಹಕ ತಾರೆ ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿದ್ದಾರೆ. 42 ವರ್ಷದವರೆಗೂ ಸಿಂಗಲ್ ಆಗಿರುವ ರಮ್ಯಾ ಅವರ ಮದುವೆ ಕುರಿತ ಶೋಧನೆಗಳು, ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಲೇ ಇವೆ.
ಇತ್ತೀಚೆಗೆ ಉದ್ಯಮಿ ಸಂಜೀವ್ ಅವರೊಂದಿಗೆ ರಮ್ಯಾ ಪ್ರೀತಿಯ ಸಂಬಂಧ ಹೊಂದಿದ್ದಾರೆ ಎಂಬ ಗಾಸಿಪ್ ಪ್ರಚಲಿತವಾಗಿತ್ತು. 2024ರ ನವೆಂಬರ್‌ನಲ್ಲಿ ರಮ್ಯಾ ವಿದೇಶದಲ್ಲಿ ಹುಟ್ಟುಹಬ್ಬವನ್ನು ಆಚರಿಸಿದ ವೇಳೆ, ಸಂಜೀವ್ ಅವರು “ಹುಟ್ಟುಹಬ್ಬದ ಶುಭಾಶಯಗಳು ನನ್ನ ದಿವೂ, ಲವ್ ಯೂ ಫಾರೆವರ್” ಎಂದು ಪೋಸ್ಟ್ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ರಮ್ಯಾ, “ಲವ್ ಯೂ ಸನಾ” ಎಂದು ಪ್ರತಿಕ್ರಿಯೆ ನೀಡಿದ್ದರು.
ಈ ಮೂಲಕ ಇಬ್ಬರ ಸ್ನೇಹದ ಕುರಿತು ಗಾಸಿಪ್ ಹುಟ್ಟಿತ್ತು. ಇತ್ತೀಚೆಗೆ ಒಂದು ಟ್ರೋಲ್ ಪೇಜ್, ರಮ್ಯಾ ಮತ್ತು ಸಂಜೀವ್ ಅವರ ಫೋಟೋ ಎಡಿಟ್ ಮಾಡಿ, “ರಮ್ಯಾ ಮದುವೆ ಆಗ್ತಿದ್ದಾರೆ!” ಎಂದು ಶೀರ್ಷಿಕೆ ನೀಡಿತ್ತು. ಇದಕ್ಕೆ ತಕ್ಷಣ ಸ್ಪಂದಿಸಿದ ರಮ್ಯಾ, ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಫೋಟೋವನ್ನು ಶೇರ್ ಮಾಡಿ, “ಫೇಕ್” ಎಂದು ಸ್ಪಷ್ಟನೆ ನೀಡಿದ್ದು, ಗೊಂದಲಕ್ಕೆ ತೆರೆ ಎಳೆದಿದ್ದಾರೆ.

