
ಕಾರ್ಕಳ: ಧರ್ಮಸ್ಥಳದಲ್ಲಿ ಎರಡು ಗುಂಪುಗಳ ಮಧ್ಯೆ ನಡೆದ ಘರ್ಷಣೆಯಲ್ಲಿ ಗಾಯಗೊಂಡ ಯುಟ್ಯೂಬರ್ ಗಳನ್ನು ಎಸ್ ಡಿಪಿಐ ಕಾರ್ಯಕರ್ತರು ಭೇಟಿ ಮಾಡಿದ್ದಾರೆ. ಧರ್ಮಸ್ಥಳ ಹೋರಾಟಗಾರರಿಗೂ ಎಸ್ ಡಿಪಿಐಗೂ ಏನು ಸಂಬಂಧ? ಏನಿದರ ಮರ್ಮ?
ಈ ಹೋರಾಟದಲ್ಲಿ ಇರುವವರನ್ನು ಸೂಕ್ಷ್ಮವಾಗಿ ಗಮನಿಸಿ, ಎಡಪಂಥೀಯರು, ನಗರ ನಕ್ಸಲರು, ಎಸ್ ಡಿಪಿಐ, ಜಿಹಾದಿ ಗ್ಯಾಂಗ್, ಕಾನೂನು ಕೈಗೆತ್ತಿಕೊಳ್ಳುವವರೇ ತುಂಬಿ ಹೋಗಿದ್ದಾರೆ. ಇವರೆಲ್ಲ ಒಟ್ಟಿಗೆ ಸೇರಿ ಹಿಂದುತ್ವ, ಹಿಂದು ಧಾರ್ಮಿಕ ನಂಬಿಕೆಗಳ ವಿರುದ್ಧ ನಡೆಸುತ್ತಿದ್ದ ಟೂಲ್ ಕಿಟ್ ಹೋರಾಟದ ಮುಂದುವರಿದ ಭಾಗವೇ “ಟಾರ್ಗೆಟ್ ಧರ್ಮಸ್ಥಳ”. ಕಾಡಿನಲ್ಲಿದ್ದ ನಕ್ಸಲರನ್ನು ಸಿಎಂ ಸಿದ್ದರಾಮಯ್ಯನವರು ನಾಡಿಗೆ ತಂದು ಬಿಟ್ಟಿದ್ದರ ಫಲ ಇದು ಎಂದು ಕಾರ್ಕಳ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ವಿ. ಸುನಿಲ್ ಕುಮಾರ್ ರವರು ತಮ್ಮ X (Twitter) ಖಾತೆಯಲ್ಲಿ ಹಂಚಿಕೊಂಡಿದ್ದಾರೆ.