ಜಲ, ವಾಯು ಸಂಕಟ, ಮಹಾಮಾರಿ, ರಾಜಕೀಯ ಬದಲಾವಣೆ – ಕೋಡಿಮಠ ಸ್ವಾಮೀಜಿಯಿಂದ ಭವಿಷ್ಯವಾಣಿ

Date:

spot_img

ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಬೆಳಗಾವಿಯಲ್ಲಿ ಸ್ಫೋಟಕ ಭವಿಷ್ಯ ನುಡಿದ್ದು, ಮುಂಬರುವ ದಿನಗಳಲ್ಲಿ ಜಗತ್ತಿಗೆ ಗಂಭೀರ ಸವಾಲುಗಳು ಎದುರಾಗಲಿವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಸ್ವಾಮೀಜಿಯವರ ಭವಿಷ್ಯವಾಣಿ ಪ್ರಕಾರ, ಲೋಕಕ್ಕೆ ಜಲ ಮತ್ತು ವಾಯು ಸಂಬಂಧಿತ ಸಂಕಟ ಎದುರಾಗಲಿದೆ. ಐದು ವರ್ಷಗಳವರೆಗೆ ಕೋವಿಡ್‌ ಮಹಾಮಾರಿ ಬೇರೆ ಬೇರೆ ರೂಪಗಳಲ್ಲಿ ಮುಂದುವರಿಯಲಿದೆ. ಜನರು ಎಚ್ಚರಿಕೆಯಿಂದಿರಬೇಕು. ಉಸಿರಾಟದ ತೊಂದರೆಯಿಂದ ಸಾವು ಸಂಭವಿಸಬಹುದೆಂಬ ಆತಂಕ ವ್ಯಕ್ತಪಡಿಸಿದ್ದಾರೆ.

ಅವರ ಮುನ್ಸೂಚನೆಯ ಪ್ರಕಾರ, ಹಿಮಾಲಯ ಕರಗಿ ದೆಹಲಿವರೆಗೆ ನೀರು ಹರಿಯುವ ಸಾಧ್ಯತೆ ಇದೆ. ಮೇಘಸ್ಫೋಟ, ಭೂಕಂಪದಂತಹ ಪ್ರಕೃತಿ ವಿಕೋಪಗಳು ಸಂಭವಿಸಬಹುದು. ದೇಶದಲ್ಲಿ ಮತ್ತೆ ಮತೀಯ ಗಲಭೆ ಹಾಗೂ ಯುದ್ಧದ ಭೀತಿ ಎದುರಾಗಲಿದೆ. ಹಲವಾರು ರಾಜಕೀಯ ನಾಯಕರಿಗೆ ಜೀವಭೀತಿಯೂ ಉಂಟಾಗಬಹುದು ಎಂದು ಹೇಳಿದ್ದಾರೆ.

ಸ್ವಾಮೀಜಿಯವರ ಪ್ರಕಾರ, ಸಂಕ್ರಾಂತಿಯವರೆಗೆ ರಾಜ್ಯ ಸರ್ಕಾರದ ಸ್ಥಿತಿ ಸ್ಥಿರವಾಗಿದೆಯಾದರೂ, ನಂತರ ಬದಲಾಗಬಹುದಾದ ರಾಜಕೀಯ ಸ್ಥಿತಿಗತಿ ಹೇಗಿರುತ್ತದೆ ಎಂಬುವುದನ್ನು ಕಾದು ನೋಡಬೇಕಾಗಿದೆ ಎಂದು ಹೇಳಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಭಾರತದ ಮಾರುಕಟ್ಟೆಗೆ ಕಾಲಿಟ್ಟ ಬೋಟ್‌ನ ಹೊಸ ಪ್ರೀಮಿಯಂ ಹೆಡ್‌ಫೋನ್

ಬೋಟ್ ಕಂಪನಿಯು 80 ಗಂಟೆಗಳ ಬ್ಯಾಟರಿ ಹಾಗೂ 45dB ಹೈಬ್ರಿಡ್ ANC ಬೆಂಬಲಿಸುವ ಪ್ರೀಮಿಯಂ ನಿರ್ವಾಣ ಯುಟೋಪಿಯಾ 2 ಹೆಡ್‌ಫೋನ್ ಭಾರತದಲ್ಲಿ ಬಿಡುಗಡೆ ಮಾಡಿದೆ.

ದಿನ ವಿಶೇಷ – ಆದಾಯ ತೆರಿಗೆ ದಿನ

ಭಾರತದಲ್ಲಿ ಪ್ರತಿ ವರ್ಷ ಜುಲೈ 24 ರಂದು ಆದಾಯ ತೆರಿಗೆ ದಿನವನ್ನು ಆಚರಿಸಲಾಗುತ್ತದೆ. ಇದರ ಇತಿಹಾಸ, ಪ್ರಾಮುಖ್ಯತೆ ಮತ್ತು ITR ಸಲ್ಲಿಕೆಯ ಕುರಿತು ವಿವರ ಇಲ್ಲಿದೆ.

ನಿಮ್ಮ ಅಡುಗೆಮನೆಯಲ್ಲಿರುವ ಈ ಒಂದು ಎಣ್ಣೆ ನೂರಾರು ಕಾಯಿಲೆಗಳಿಗೆ ಮನೆಮದ್ದು: ಕ್ಯಾಸ್ಟರ್ ಆಯಿಲ್ ಬಳಸುವ ಸರಿಯಾದ ವಿಧಾನ ಇಲ್ಲಿದೆ.

ಹರಳೆಣ್ಣೆಯ ಆರೋಗ್ಯಕರ ಪ್ರಯೋಜನಗಳು, ಕೂದಲ ರಕ್ಷಣೆ ಮತ್ತು ಮಲಬದ್ಧತೆಗೆ ಇದನ್ನು ಬಳಸುವ ಸರಿಯಾದ ವಿಧಾನಗಳ ಕುರಿತು ಇಲ್ಲಿದೆ ಪೂರ್ಣ ಮಾಹಿತಿ.

ಉದ್ಯಮಿ ಸಂಪತ್‌ ಶೆಟ್ಟಿಗೆ ಪ್ರತಿಷ್ಠಿತ ಧರ್ಮಯೋಗಿ ಪುರಸ್ಕಾರ

ಗ್ರಾಮೀಣ ಉದ್ಯಮಿ ಮಂದಾರ್ತಿ ಸಂಪತ್ ಶೆಟ್ಟಿ ಅವರಿಗೆ ಮುದ್ರಾಡಿಯಲ್ಲಿ ಧರ್ಮಯೋಗಿ ಸನ್ಮಾನ ಪ್ರಶಸ್ತಿ ಘೋಷಣೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ