
ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಬೆಳಗಾವಿಯಲ್ಲಿ ಸ್ಫೋಟಕ ಭವಿಷ್ಯ ನುಡಿದ್ದು, ಮುಂಬರುವ ದಿನಗಳಲ್ಲಿ ಜಗತ್ತಿಗೆ ಗಂಭೀರ ಸವಾಲುಗಳು ಎದುರಾಗಲಿವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸ್ವಾಮೀಜಿಯವರ ಭವಿಷ್ಯವಾಣಿ ಪ್ರಕಾರ, ಲೋಕಕ್ಕೆ ಜಲ ಮತ್ತು ವಾಯು ಸಂಬಂಧಿತ ಸಂಕಟ ಎದುರಾಗಲಿದೆ. ಐದು ವರ್ಷಗಳವರೆಗೆ ಕೋವಿಡ್ ಮಹಾಮಾರಿ ಬೇರೆ ಬೇರೆ ರೂಪಗಳಲ್ಲಿ ಮುಂದುವರಿಯಲಿದೆ. ಜನರು ಎಚ್ಚರಿಕೆಯಿಂದಿರಬೇಕು. ಉಸಿರಾಟದ ತೊಂದರೆಯಿಂದ ಸಾವು ಸಂಭವಿಸಬಹುದೆಂಬ ಆತಂಕ ವ್ಯಕ್ತಪಡಿಸಿದ್ದಾರೆ.
ಅವರ ಮುನ್ಸೂಚನೆಯ ಪ್ರಕಾರ, ಹಿಮಾಲಯ ಕರಗಿ ದೆಹಲಿವರೆಗೆ ನೀರು ಹರಿಯುವ ಸಾಧ್ಯತೆ ಇದೆ. ಮೇಘಸ್ಫೋಟ, ಭೂಕಂಪದಂತಹ ಪ್ರಕೃತಿ ವಿಕೋಪಗಳು ಸಂಭವಿಸಬಹುದು. ದೇಶದಲ್ಲಿ ಮತ್ತೆ ಮತೀಯ ಗಲಭೆ ಹಾಗೂ ಯುದ್ಧದ ಭೀತಿ ಎದುರಾಗಲಿದೆ. ಹಲವಾರು ರಾಜಕೀಯ ನಾಯಕರಿಗೆ ಜೀವಭೀತಿಯೂ ಉಂಟಾಗಬಹುದು ಎಂದು ಹೇಳಿದ್ದಾರೆ.
ಸ್ವಾಮೀಜಿಯವರ ಪ್ರಕಾರ, ಸಂಕ್ರಾಂತಿಯವರೆಗೆ ರಾಜ್ಯ ಸರ್ಕಾರದ ಸ್ಥಿತಿ ಸ್ಥಿರವಾಗಿದೆಯಾದರೂ, ನಂತರ ಬದಲಾಗಬಹುದಾದ ರಾಜಕೀಯ ಸ್ಥಿತಿಗತಿ ಹೇಗಿರುತ್ತದೆ ಎಂಬುವುದನ್ನು ಕಾದು ನೋಡಬೇಕಾಗಿದೆ ಎಂದು ಹೇಳಿದ್ದಾರೆ.