
ಹಿರಿಯಡಕ: ದೀಪಾವಳಿ ಹಬ್ಬದ ಪ್ರಯುಕ್ತ ಶ್ರೀ ವಿಶ್ವಕರ್ಮ ಸಮಾಜೋದ್ಧಾರಕ ಸಂಘ (ರಿ) ಕೊಂಡಾಡಿ ಭಜನೆಕಟ್ಟೆ, ಹಿರಿಯಡಕ ಇವರ ವತಿಯಿಂದ ಗೂಡುದೀಪ ಸ್ಪರ್ಧೆಯು ನಡೆಯಲಿದೆ.
ಈ ಸ್ಪರ್ಧೆಯು ದಿನಾಂಕ 19.10.2025 ರಂದು ಆದಿತ್ಯವಾರ ಮಧ್ಯಾಹ್ನ ಗಂಟೆ 03:00 ರಿಂದ ಶ್ರೀ ವಿಶ್ವಕರ್ಮ ಸಮಾಜೋದ್ಧಾರಕ ಸಂಘ (ರಿ) ಕೊಂಡಾಡಿ ಭಜನೆಕಟ್ಟೆಯಲ್ಲಿ ನಡೆಯಲಿದೆ.
ಸ್ಪರ್ಧೆಯ ವಿಭಾಗಗಳು
ಈ ಬಾರಿಯ ಗೂಡುದೀಪ ಸ್ಪರ್ಧೆಯನ್ನು ಎರಡು ಮುಖ್ಯ ವಿಭಾಗಗಳಲ್ಲಿ ಆಯೋಜಿಸಲಾಗಿದೆ:
- ಸಾಂಪ್ರದಾಯಕ ವಿಭಾಗ
- ಐಚ್ಚಿಕ ವಿಭಾಗ
ಬಹುಮಾನಗಳ ವಿವರ
ಪ್ರತಿ ವಿಭಾಗದಲ್ಲಿ ಪ್ರಥಮ ಮತ್ತು ದ್ವಿತೀಯ ಬಹುಮಾನಗಳನ್ನು ನೀಡಲಾಗುತ್ತದೆ.
- ಪ್ರಥಮ ಬಹುಮಾನ: ₹2000 ನಗದು ಮತ್ತು ಟ್ರೋಫಿ
- ದ್ವಿತೀಯ ಬಹುಮಾನ: ₹1000 ನಗದು ಮತ್ತು ಟ್ರೋಫಿ
- ಇದರ ಜೊತೆಗೆ, ಯಾವುದಾದರೂ ಒಂದು ಗೂಡುದೀಪಕ್ಕೆ ‘ಸಾರ್ವಜನಿಕರ ಆಯ್ಕೆ’ – ವಿಶೇಷ ಬಹುಮಾನವನ್ನೂ ನೀಡಲಾಗುವುದು.
ಸ್ಪರ್ಧಾ ನಿಯಮಗಳು
- ಕಡ್ಡಾಯವಾಗಿ ಸಂಘದ ಸದಸ್ಯರಿಗೆ ಮಾತ್ರ ಅವಕಾಶ.
- ಸ್ಪರ್ಧಾಳುಗಳು ನಿಗದಿತ ದಿನಾ೦ಕದ೦ದು ಮಧ್ಯಾಹ್ನ ಗಂಟೆ 02:30 ಕ್ಕೆ ಹಾಜರಿರಬೇಕು.
- ಒಂದು ತಂಡದಲ್ಲಿ ಗರಿಷ್ಠ 2 ಮಂದಿಗೆ ಅವಕಾಶ.
- ಪುರುಷರರಿಗೆ “ಸಾಂಪ್ರದಾಯಕ ವಿಭಾಗ” ದಲ್ಲಿ ಸ್ಪರ್ಧಿಸಲು ಮಾತ್ರ ಅವಕಾಶ.
- 10ನೇ ತರಗತಿಯ ಕೆಳಗಿನ ಮಕ್ಕಳನ್ನು “ಮಕ್ಕಳ ವಿಭಾಗದಲ್ಲಿ ಪರಿಗಣಿಸಲಾಗುವುದು,
ಈ ವಿಭಾಗವು ‘ಕಸದಿಂದ ರಸ” ಎಂಬ ಕಲ್ಪನೆಯನ್ನು ಒಳಗೊಂಡಿರುತ್ತದೆ. - ಗೂಡುದೀಪ ತಯಾರಿಕೆಗೆ ಬೇಕಾಗುವ ಎಲ್ಲಾ ಪರಿಕರಗಳನ್ನು ಸ್ಪರ್ಧಿಗಳೇ ತರಬೇಕು ಮತ್ತು ಸ್ಥಳದಲ್ಲೇ
ತಯಾರಿಸಬೇಕು. - ಐಚ್ಚಿಕ ಗೂಡುದೀಪ ಸ್ಪರ್ಧೆಯಲ್ಲಿ ಕೃತಿಯ ಅಂದ ಹೆಚ್ಚಿಸಲು ಯಾವುದೇ ವಸ್ತುಗಳನ್ನು ಬಳಸಬಹುದು.
- ತಯಾರಿಸಿ ತ೦ದ ಗೂಡುದೀಪಗಳನ್ನು ಸ್ಪರ್ಧೆಗೆ ಸ್ವೀಕರಿಸಲಾಗುವುದಿಲ್ಲ.
- ಗೂಡುದೀಪ ತಯಾರಿಸಲು 3 ಗಂಟೆಗಳ ಕಾಲಾವಕಾಶ ನೀಡಲಾಗುವುದು ನೀಡಿದ ಸಮಯಾವಕಾಶದ
ಒಳಗೆ ಕೃತಿಗಳನ್ನು ಪೂರ್ತಿಗೊಳಿಸಬೇಕು. - ಪ್ರತೀ ವಿಭಾಗದಲ್ಲಿ ಪ್ರಥಮ ಮತ್ತು ದ್ವಿತೀಯ ಬಹುಮಾನಗಳನ್ನು ನೀಡಲಾಗುವುದು.
- ಯಾವುದಾದರೂ ಒ೦ದು ಗೂಡುದೀಪಕ್ಕೆ ‘ಸಾರ್ವಜನಿಕರ ಆಯ್ಕೆ’ – ವಿಶೇಷ ಬಹುಮಾನವನ್ನೂ ನೀಡಲಾಗುವುದು.
- ಯಾವುದೇ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಬಳಸುವಂತಿಲ್ಲ.
- ತೀರ್ಪುಗಾರರ ತೀರ್ಮಾನವೇ ಅಂತಿಮ ತೀರ್ಮಾನ.
ದೀಪಾವಳಿಯ ಪ್ರಯುಕ್ತ ನಡೆಯಲಿರುವ ಈ ಗೂಡುದೀಪ ಸ್ಪರ್ಧೆಗೆ ಶ್ರೀ ವಿಶ್ವಕರ್ಮ ಸಮಾಜೋದ್ಧಾರಕ ಸಂಘ (ರಿ) ಇದರ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಹಾಗೂ ಶ್ರೀ ವಿಶ್ವಕರ್ಮ ಮಹಿಳಾ ಮಂಡಳಿ ಕೊಂಡಾಡಿ ಭಜನೆಕಟ್ಟೆ, ಹಿರಿಯಡಕ ಇವರು ಎಲ್ಲರಿಗೂ ಆದರದ ಸ್ವಾಗತವನ್ನು ಬಯಸಿದ್ದಾರೆ.
ಗೂಡುದೀಪ ಸ್ಪರ್ಧೆ ನೋಂದಣಿಗೆ ಕೊನೆಯ ದಿನಾಂಕ: 17.10.2025.ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ 9845660232 ಮತ್ತು 8970724401 ಸಂಖ್ಯೆಗಳನ್ನು ಸಂಪರ್ಕಿಸಬಹುದು.