spot_img

ಗ್ರಾಮ ವಿಕಾಸ ಸಮಿತಿ, ಗ್ರಾಮ ಪಂಚಾಯತ್ ಮತ್ತು ಅರಣ್ಯ ಇಲಾಖೆಯ ವತಿಯಿಂದ ಸಿದ್ದಾಪುರದಲ್ಲಿ ಯಶಸ್ವಿಯಾದ ವನಮಹೋತ್ಸವ ಕಾರ್ಯಕ್ರಮ

Date:

spot_img

ಸಿದ್ದಾಪುರ : ಗ್ರಾಮ ವಿಕಾಸ ಸಮಿತಿ ಸಿದ್ದಾಪುರ, ಗ್ರಾಮ ಪಂಚಾಯತ್ ಸಿದ್ದಾಪುರ, ವಲಯ ಅರಣ್ಯಾಧಿಕಾರಿಗಳ ಕಚೇರಿ ಸಿದ್ದಾಪುರ, ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆ ಸಿದ್ದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮವನ್ನು ಗ್ರಾಮ ವಿಕಾಸ ಸಮಿತಿ ವಿಭಾಗ ಟೋಳಿ ಸದಸ್ಯರಾದ ಶ್ರೀಮತಿ ರಮಿತಾ ಶೈಲೇಂದ್ರ ಮತ್ತು ಶಂಕರನಾರಾಯಣ ವಲಯ ಅರಣ್ಯಾಧಿಕಾರಿಗಳಾದ ಶ್ರೀಮತಿ ಜ್ಯೋತಿ ಕೆ.ಸಿ ಅವರು ವಸತಿ ಶಾಲೆಯ ಪ್ರಾಂಶುಪಾಲರಾದ ಶ್ರೀ ಗಣೇಶ ಅವರಿಗೆ ಗಿಡ ಹಸ್ತಾಂತರಿಸುವುದರ ಮೂಲಕ ಉದ್ಘಾಟಿಸಿದರು.

ಶ್ರೀಮತಿ ರಮಿತಾ ಶೈಲೇಂದ್ರ ಅವರು ಮಾತನಾಡಿ “ಪ್ರಕೃತಿ ನಮಗೆಲ್ಲವನ್ನೂ ಕೊಟ್ಟಿದೆ, ನಾವು ಅದರ ಋಣ ತೀರಿಸುವ ಕೆಲಸ ಮಾಡಬೇಕಾಗಿದೆ” ಎಂದು ಹೇಳಿದರು . ಜೊತೆಗೆ ಅವರು ವನಮಹೋತ್ಸವದ ಉದ್ದೇಶ, ನಮ್ಮ ಹಿರಿಯರು ಪ್ರಕೃತಿ ಪೂಜಕರಾಗಿದ್ದುದರ ಬಗ್ಗೆ ,ಪ್ರಕೃತಿ ಪೂಜೆಯ ವೈಜ್ಞಾನಿಕ ಹಿನ್ನಲೆಯ ಬಗ್ಗೆ ಹಾಗೂ ಸಮಾಜ ಕಟ್ಟುವಲ್ಲಿ ಗ್ರಾಮ ವಿಕಾಸದ ಪಾತ್ರದ ಕುರಿತು ಮಾತನಾಡಿದರು.

ಶ್ರೀಮತಿ ಜ್ಯೋತಿ ಕೆ.ಸಿ ವಲಯ ಅರಣ್ಯಾಧಿಕಾರಿಗಳು ಮಾತನಾಡಿ ಅರಣ್ಯ ಸಂರಕ್ಷಣೆಯಲ್ಲಿ ನಮ್ಮ ಜವಾಬ್ದಾರಿ,ಮುಂದಿನ ಪೀಳಿಗೆಗೆ ಪ್ರಕೃತಿ ಪಾಠದ ಅವಶ್ಯಕತೆಯ ಕುರಿತು ಮಾತನಾಡಿದರು. ಗ್ರಾಮ ವಿಕಾಸ ಸಮಿತಿಯ ಸದಸ್ಯರಾದ ಶ್ರೀ ಸಂತೋಷ್ ಕುಮಾರ್ ಶೆಟ್ಟಿ ಅವರು ತಮ್ಮ ಪ್ರಾಸ್ತಾವಿಕ ಮಾತಿನಲ್ಲಿ ಗ್ರಾಮ ವಿಕಾಸ ಸಮಿತಿಯ ಕಾರ್ಯ ಉದ್ದೇಶಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಶ್ರೀ ಪ್ರವೀಣ್ ಪಟೇಲ್ ಮಾನ್ಯ ಸಂಘಚಾಲಕರು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸಿದ್ದಾಪುರ ತಾಲೂಕು, ಶ್ರೀ ಕೃಷ್ಣ ಪೂಜಾರಿ ಉಪಾಧ್ಯಕ್ಷರು ಗ್ರಾಮ ಪಂಚಾಯತ್ ಸಿದ್ದಾಪುರ , ಶ್ರೀ ಸಂಜೀವ ಉಪ ವಲಯ ಅರಣ್ಯಾಧಿಕಾರಿಗಳು ಶಂಕರನಾರಾಯಣ ವಲಯ , ಶ್ರೀ ಗಣೇಶ ಪ್ರಾಂಶುಪಾಲರು ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆ ಸಿದ್ದಾಪುರ, ಶ್ರೀ ಸುಧಾಕರ ಆಜ್ರಿ ಗ್ರಾಮ ವಿಕಾಸ ಸಮಿತಿ ಜಿಲ್ಲಾ ಸಹಸಂಯೋಜಕರು, ಶ್ರೀ ಶ್ರೀಕಾಂತ್ ನಾಯಕ್ ತಾಲೂಕು ಸಂಯೋಜಕರು ಗ್ರಾಮ ವಿಕಾಸ ಸಮಿತಿ ಸಿದ್ದಾಪುರ ತಾಲೂಕು, ಶ್ರೀ ಎಸ್ ಪಾಂಡುರಂಗ ಪೈ ಸಂಯೋಜಕರು ಗ್ರಾಮ ವಿಕಾಸ ಸಮಿತಿ ಸಿದ್ದಾಪುರ , ಶ್ರೀ ಭೋಜರಾಜ್ ಶೆಟ್ಟಿ ಅಧ್ಯಕ್ಷರು ಭಾರತೀಯ ಕಿಸಾನ್ ಸಂಘ ಗ್ರಾಮ ಸಮಿತಿ ಸಿದ್ದಾಪುರ, ಶ್ರೀ ಭೋಜ ಶೆಟ್ಟಿ ಕಡ್ರಿ ಅಧ್ಯಕ್ಷರು ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆ ಹೋರಾಟ ಸಮಿತಿ ಸಿದ್ದಾಪುರ, ಶ್ರೀ N.G.ಭಟ್ ಅಧ್ಯಕ್ಷರು ರೋಟರಿ ಕ್ಲಬ್ ಹೊಸಂಗಡಿ ಸಿದ್ದಾಪುರ, ಶ್ರೀ ಟಿ.ಜಿ.ಪಾಂಡುರಂಗ ಪೈ ವಿದ್ಯಾಭಾರತಿಯ ಜಿಲ್ಲಾಧ್ಯಕ್ಷರು, ಶ್ರೀ ಚಿದಾನಂದ ಶೆಟ್ಟಿ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷರು, ಪರ್ಯಾವರಣ ತಾಲೂಕು ಪ್ರಮುಖ ಶ್ರೀಕಾಂತ್ ಶೆಣೈ ಆರ್ಗೋಡು, ಶ್ರೀ ರಾಜೇಂದ್ರ ಬೆಚ್ಚಳ್ಳಿ ಅಧ್ಯಕ್ಷರು ಶ್ರೀ ಭೋಜು ಪೂಜಾರಿ ಚಾರಿಟಬಲ್ ಟ್ರಸ್ಟ್ ಬೆಚ್ಚಳ್ಳಿ , ಗ್ರಾಮ ವಿಕಾಸ ಸಮಿತಿ ಸದಸ್ಯರು, ಗ್ರಾಮ ಪಂಚಾಯತ್ ಸದಸ್ಯರು, ಅರಣ್ಯ ಸಿಬ್ಬಂದಿಗಳು, ವಸತಿ ಶಾಲೆಯ ಅಧ್ಯಾಪಕ ವೃಂದ, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಸಿಬಂದಿ ವರ್ಗದವರು ಉಪಸ್ಥಿತರಿದ್ದರು.

ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಯ ಪ್ರಾಂಶುಪಾಲರಾದ ಶ್ರೀ ಗಣೇಶ ಇವರು ಸ್ವಾಗತಿಸಿದರು. ಅಧ್ಯಾಪಕರಾದ ಶ್ರೀ ಪ್ರತಾಪಚಂದ್ರ ಕಿಣಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಪ್ರೇಮ ವೈಫಲ್ಯದ ದುರಂತ ಅಂತ್ಯ: ಪ್ರಿಯತಮೆಗೆ ಇರಿದು ಯುವಕನ ಆತ್ಮಹತ್ಯೆ, ಯುವತಿ ಗಂಭೀರ!

ಪ್ರೇಮ ವೈಫಲ್ಯದಿಂದ ಕುಪಿತಗೊಂಡ ಯುವಕನೊಬ್ಬ, ಮದುವೆಯಾಗಲು ನಿರಾಕರಿಸಿದ ಪ್ರಿಯತಮೆಗೆ ಚಾಕುವಿನಿಂದ ಇರಿದು, ಆಕೆ ಮೃತಪಟ್ಟಳೆಂದು ತಪ್ಪಾಗಿ ಭಾವಿಸಿ ಅದೇ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘೋರ ಘಟನೆ ಇಂದು ಬೆಳಿಗ್ಗೆ ಫರಂಗಿಪೇಟೆಯ ಸುಜೀರ್ ಮಲ್ಲಿ ಎಂಬಲ್ಲಿ ನಡೆದಿದೆ.

‘ಕಾಂತಾರ: ಚಾಪ್ಟರ್ 1’ ಬಿಡುಗಡೆ ದಿನಾಂಕ ಫಿಕ್ಸ್: ಅ. 2ಕ್ಕೆ ರಿಷಬ್ ಶೆಟ್ಟಿ ಘರ್ಜನೆ!

ರಾಷ್ಟ್ರ ಪ್ರಶಸ್ತಿ ವಿಜೇತ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸುತ್ತಿರುವ ಬಹುನಿರೀಕ್ಷಿತ 'ಕಾಂತಾರ: ಚಾಪ್ಟರ್ 1' ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ.

ಜ್ಞಾನಸುಧಾದಲ್ಲಿ ವೃತ್ತಿಪರ ಮಾರ್ಗದರ್ಶನ

ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ನಡೆದ ವೃತ್ತಿಪರ ಕೋರ್ಸುಗಳ ಮಾರ್ಗದರ್ಶನ ಕಾರ್ಯಕ್ರಮ ನಡೆಯಿತು.

ಸಿ ಎ ಫೌಂಡೇಶನ್ ಫಲಿತಾಂಶದಲ್ಲೂ ಮುಂಚೂಣಿಯಲ್ಲಿರುವ ಕ್ರಿಯೇಟಿವ್ ಪಿಯು ಕಾಲೇಜು

ಇನ್ಸಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ ಆಫ್ ಇಂಡಿಯಾ ಸಂಸ್ಥೆಯವರು ನಡೆಸಿದ ಸಿ ಎ ಫೌಂಡೇಶನ್ ಫಲಿತಾಂಶವು 06 ಜುಲೈ 2025 ರಂದು ಪ್ರಕಟಗೊಂಡಿದ್ದು, ಕಾರ್ಕಳ ಕ್ರಿಯೇಟಿವ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಗಮನಾರ್ಹ ಸಾಧನೆಗೈದಿದ್ದಾರೆ.