
ವಿಜೇತ ವಿಶೇಷ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಎನ್.ಎಸ್.ಎ.ಎಮ್.ಎಫ್.ಜಿ.ಸಿ. ನಿಟ್ಟೆ ಕಾಲೇಜಿನ ಎನ್.ಎಸ್.ಎಸ್. ಟೀಮ್ ವತಿಯಿಂದ ವಿಶೇಷ ಶಾಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಆಯೋಜಿಸಿ, ಸಾಮಾಜಿಕ ಕಳಕಳಿ ಮೆರೆಯಲಾಯಿತು.

ಎನ್‌ಎಸ್‌ಎಸ್‌ನಿಂದ ಮಾದರಿ ಸೇವೆ
ನಿಟ್ಟೆ ಕಾಲೇಜಿನ ಎನ್.ಎಸ್.ಎಸ್. ಟೀಮ್ ಸದಸ್ಯರು ವಿಜೇತ ವಿಶೇಷ ಶಾಲೆಗೆ ಭೇಟಿ ನೀಡಿ, ಶಾಲೆಯ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಿದರು. ಇದರ ಜೊತೆಗೆ, ಶಾಲಾ ಮಕ್ಕಳಿಗೆ ಅಗತ್ಯವಿರುವ ದಿನಸಿ ವಸ್ತುಗಳನ್ನು ಹಸ್ತಾಂತರಿಸಿದರು ಮತ್ತು ಮನರಂಜನೆಗಾಗಿ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ವಿಶೇಷ ಮಕ್ಕಳೊಂದಿಗೆ ಸಂತಸ ಹಂಚಿಕೊಂಡರು.

ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಎನ್.ಎಸ್.ಎಸ್. ಯೋಜನಾಧಿಕಾರಿಗಳಾದ ನಮಿರಾಜ್, ಸೌಮ್ಯಶ್ರೀ, ದಿವ್ಯಾಕ್ಷ್ ಹಾಗೂ ವಿದ್ಯಾರ್ಥಿ ನಾಯಕರಾದ ಚಿನ್ಮಯ್ ಸದಾನಂದ್, ರೀತು, ಸೆಕ್ರೆಟರಿ ತಂಶೀರ್, ಮನಿಷ, ಶಮಂತ್, ಶ್ರಾವ್ಯ, ಶರತ್ ಮತ್ತು ಖುಷಿ ಉಪಸ್ಥಿತರಿದ್ದರು.
ವಿಶೇಷ ಶಿಕ್ಷಕಿ ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು. ಮ್ಯಾನೇಜಿಂಗ್ ಟ್ರಸ್ಟಿ ಹರೀಶ್ ಸ್ವಾಗತಿಸಿ, ವಿಶೇಷ ಶಿಕ್ಷಕಿ ಶ್ರೀನಿಧಿ ವಂದನಾರ್ಪಣೆ ಮಾಡಿದರು.



































