
ನಿಂಜೂರ್: ನಿಂಜೂರ್ ವಿಶ್ವಕರ್ಮ ಸಂಘ (ರಿ.) ಹಾಗೂ ವಿಶ್ವಕರ್ಮ ಮಹಿಳಾ ಮಂಡಳಿ ವತಿಯಿಂದ ವರಮಹಾಲಕ್ಷ್ಮಿ ಪೂಜೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಮಾಜದ ಹಿರಿಯ ಮಹಿಳೆಯರಾದ ಅಮಣಿ ಆಚಾರ್ಯ ಪಲ್ಕೆ, ಲಲಿತಾ ಆಚಾರ್ಯ ನಿಂಜೂರ್ ಮತ್ತು ವಾರಿಜಾ ಆಚಾರ್ಯ ನಿಂಜೂರ್ ಅವರನ್ನು ಮಹಿಳಾ ಮಂಡಳಿಯ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮವು ಸಂಘಟಿತ ರೀತಿಯಲ್ಲಿ ನಡೆದು, ಎಲ್ಲರೂ ಶ್ರದ್ಧಾಭಕ್ತಿಯಿಂದ ಪೂಜೆಯಲ್ಲಿ ಪಾಲ್ಗೊಂಡರು. ಇದು ಸಮಾಜದಲ್ಲಿ ಸೌಹಾರ್ದತೆ ಮತ್ತು ಧಾರ್ಮಿಕ ಭಾವನೆಯನ್ನು ಹೆಚ್ಚಿಸಿತು.