
ಬೆಂಗಳೂರು: ಬಿಗ್‌ಬಾಸ್ ಖ್ಯಾತಿಯ ನಟಿ ವೈಷ್ಣವಿ ಗೌಡ ಅವರ ಬದುಕಿನಲ್ಲಿ ಹೊಸ ಅಧ್ಯಾಯ ಶುರುವಾಗಿದೆ. ಇತ್ತೀಚೆಗಷ್ಟೇ ನಿಶ್ಚಿತಾರ್ಥ ನೆರವೇರಿಸಿಕೊಂಡ ವೈಷ್ಣವಿ, ಈಗ ಹಸಮಣೆ ಏರಲು ಸಜ್ಜಾಗಿದ್ದಾರೆ. ‘ಸೀತಾರಾಮ’ ಧಾರಾವಾಹಿ ಅಂತ್ಯವಾದ ಬೆನ್ನಲ್ಲೇ ನಟಿಯ ಮನೆಯಲ್ಲಿರುವ ಎಲ್ಲರೂ ಮದುವೆ ಸಂಭ್ರಮದಲ್ಲಿದ್ದಾರೆ.
ಈ ವಿಚಾರವನ್ನು ವೈಷ್ಣವಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಮನೆಯಲ್ಲಿ ನಡೆದ ಮೆಹಂದಿ, ಅರಶಿಣ, ಚಪ್ಪರ ಪೂಜೆ ಸೇರಿದಂತೆ ಹಲವು ಶಾಸ್ತ್ರಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಗೌಡರ ಸಂಪ್ರದಾಯದಂತೆ ಮನೆ ತುಂಬಾ ಮಂಗಳಮಯ ವಾತಾವರಣ ಕಂಡುಬರುತ್ತಿದೆ.
ಇಂದು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಕಲ್ಯಾಣ ಮಂಟಪದಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ವೈಷ್ಣವಿ ಗೌಡ ಹಾಗೂ ಇಂಡಿಯನ್ ಏರ್‌ಫೋರ್ಸ್ ಅಧಿಕಾರಿ ಅನುಕೂಲ್ ಮಿಶ್ರಾ ಅವರ ಮದುವೆ ಅದ್ಧೂರಿಯಾಗಿ ಜರುಗಲಿದೆ. ಛತ್ತೀಸ್‌ಗಢ ಮೂಲದ ಅನುಕೂಲ್ ಅವರೊಂದಿಗೆ ವೈಷ್ಣವಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.
ಮೆಗಾ ಸೀರಿಯಲ್‌ನಲ್ಲಿ ಯಶಸ್ಸು ಗಳಿಸಿದ ಬಳಿಕ ವೈಷ್ಣವಿ ಅವರ ವೃತ್ತಿಜೀವನದಷ್ಟೇ ಪ್ರೇಮಜೀವನವೂ ಯಶಸ್ವಿಯಾಗುತ್ತಿದೆ ಎಂಬುದರಲ್ಲಿ ಅನುಮಾನವೇ ಇಲ್ಲ.