
ಮಲ್ಪೆ : ಶ್ರೀ ವಡಭಾಂಡ ಬಲರಾಮ ದೇವಸ್ಥಾನ, ವಡಭಾಂಡೇಶ್ವರ ಇಲ್ಲಿಯ ಕಾಲಾವಧಿ ಉತ್ಸವದ ಪ್ರಯುಕ್ತ 11-03-2025ರಿಂದ 18-03-2025ರವರೆಗೆ
ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ದಿನಾಂಕ 13-03-2025ರಂದು ಬ್ರಹ್ಮಪ್ರತಿಷ್ಠೆ ನಡೆಯಲಿದೆ. ದಿನಾಂಕ 16-03-2025ರಂದು ಮಹಾಪೂಜೆ,ಉತ್ಸವ ಬಲಿ,ರಥಾರೋಹಣ ಹಾಗೂ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಅದೇ ದಿನ ಸಂಜೆ 7:30ರಿಂದ ಶ್ರೀ ಮನ್ಮಹಾರಥೋತ್ಸವ ನಡೆಯಲಿರುವುದು. ದಿನಾಂಕ 17-03-2025ರಂದು ತುಲಾಭಾರ, ಮಹಾಪೂಜೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಗವದ್ಭಕ್ತರೆಲ್ಲರೂ ಭಾಗವಹಿಸಿ ಶ್ರೀ ದೇವರ ಸಿರಿಮುಡಿ ಗಂಧ-ಪ್ರಸಾದವನ್ನು ಸ್ವೀಕರಿಸಿ ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.