spot_img

ಉತ್ತರ ಪ್ರದೇಶ: ಗುರುತು ಮರೆಮಾಚಿ ವಂಚನೆ, ಮತಾಂತರಕ್ಕೆ ಒತ್ತಾಯ; ಪ್ರಯಾಗ್‌ರಾಜ್ ಮಹಿಳೆಯಿಂದ ದೂರು

Date:

spot_img

ಪ್ರಯಾಗ್‌ರಾಜ್ : ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಮೂಲದ ಮಹಿಳೆಯೊಬ್ಬರು ತನ್ನನ್ನು ವಂಚಿಸಿ, ಮತಾಂತರಕ್ಕೆ ಒತ್ತಾಯಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಮತಾಂತರಕ್ಕೆ ನಿರಾಕರಿಸಿದಾಗ ಆರೋಪಿಯು ತನ್ನ ಮೇಲೆ ಹಲ್ಲೆ ನಡೆಸಿ, ಬ್ಲ್ಯಾಕ್‌ಮೇಲ್ ಮಾಡಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಗುರುತು ಮರೆಮಾಚಿದ್ದ ಆರೋಪಿ

ಪೊಲೀಸ್ ದೂರಿನ ಪ್ರಕಾರ, ಆರೋಪಿಯು ತನ್ನನ್ನು ‘ರಾಜ್’ ಎಂದು ಪರಿಚಯಿಸಿಕೊಂಡಿದ್ದ. ಆರಂಭದಲ್ಲಿ ಸ್ನೇಹಿತರಾಗಿದ್ದ ಇಬ್ಬರು, ನಂತರ ಮದುವೆಯಾಗುವಂತೆ ರಾಜ್ ಮಹಿಳೆಯ ಮೇಲೆ ಒತ್ತಡ ಹೇರಿದ್ದ. 2024ರ ದೀಪಾವಳಿ ಸಮಯದಲ್ಲಿ ಬಡಾ ಇಮಾಂಬರಾಗೆ ಭೇಟಿ ನೀಡಿದಾಗ, ಆತನ ನಿಜವಾದ ಹೆಸರು ಮೊಹಮ್ಮದ್ ಫುರ್ಖಾನ್ ಎಂದು ಮಹಿಳೆಗೆ ತಿಳಿದು ಬಂದಿದೆ.

ಹಲ್ಲೆ, ಬ್ಲ್ಯಾಕ್‌ಮೇಲ್ ಆರೋಪ

ತನ್ನ ನಿಜವಾದ ಗುರುತು ಬಯಲಾದ ನಂತರ, ಮೊಹಮ್ಮದ್ ಫುರ್ಖಾನ್ ಮಹಿಳೆಯನ್ನು ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಾಯಿಸಿದ್ದಾನೆ. ಆಕೆ ಇದಕ್ಕೆ ನಿರಾಕರಿಸಿದಾಗ ದೈಹಿಕವಾಗಿ ಹಲ್ಲೆ ನಡೆಸಿ, ಕತ್ತು ಹಿಸುಕಿ ಕೊಲೆ ಮಾಡಲು ಪ್ರಯತ್ನಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಅಲ್ಲದೆ, ಆಕೆಯ ಖಾಸಗಿ ಫೋಟೊಗಳನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಆಗಸ್ಟ್ 7ರಂದು ಆರೋಪಿಯು ಆಕೆಯ ಮನೆಗೆ ಬಲವಂತವಾಗಿ ಪ್ರವೇಶಿಸಿ ಮತ್ತಷ್ಟು ಬೆದರಿಕೆ ಹಾಕಿದ್ದಾನೆ. ಆಗಸ್ಟ್ 11ರಂದು ಮಹಿಳೆ ಇಲ್ಲದಿದ್ದಾಗ, ಆಕೆಯ ಕೋಣೆಯ ಬೀಗ ಮುರಿದು ₹25,000 ನಗದನ್ನು ಕದ್ದಿದ್ದಾನೆ ಎಂದು ಹೇಳಲಾಗಿದೆ.

ಚಿನ್ಹಾಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೂರ್ವ ವಲಯದ ಡಿಸಿಪಿ ಶಶಾಂಕ್ ಸಿಂಗ್ ಖಚಿತಪಡಿಸಿದ್ದಾರೆ.

25 ವರ್ಷದ ಮಹಿಳೆ ಪ್ರಸ್ತುತ ಲಕ್ನೋದ ಚಿನ್ಹಾಟ್ ಪ್ರದೇಶದಲ್ಲಿ ವಾಸವಾಗಿದ್ದು, 2023 ರಲ್ಲಿ ಬಿಬಿಡಿ ವಿಶ್ವವಿದ್ಯಾಲಯದಲ್ಲಿ ಹೋಟೆಲ್ ಮ್ಯಾನೇಜ್‌ಮೆಂಟ್ ವ್ಯಾಸಂಗ ಮಾಡುತ್ತಿದ್ದರು. ತಂದೆಯ ಮರಣದ ನಂತರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಕಾರಣ, ಆಗಸ್ಟ್ 2024 ರಲ್ಲಿ ಕಾಲೇಜು ಬಿಟ್ಟು ಸಣ್ಣ ಆಹಾರ ಅಂಗಡಿಯೊಂದನ್ನು ತೆರೆದಿದ್ದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ ಆಕ್ಟಿವ್ 5 ಭಾರತದಲ್ಲಿ ಬಿಡುಗಡೆ

ದೇಶದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆದ ಸ್ಯಾಮ್‌ಸಂಗ್, ಭಾರತೀಯ ವೃತ್ತಿಪರರು ಮತ್ತು ಕೈಗಾರಿಕೆಗಳ ಅಗತ್ಯಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾದ ಗ್ಯಾಲಕ್ಸಿ ಟ್ಯಾಬ್ ಆಕ್ಟಿವ್ 5 ಎಂಟರ್‌ಪ್ರೈಸ್ ಎಡಿಷನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಭಿನ್ನ ಕೆನೆಪದರ ನೀತಿಯಿಂದ ರಾಜ್ಯದ ವಿಧ್ಯಾರ್ಥಿಗಳಿಗೆ ಅನ್ಯಾಯ : ಶೂನ್ಯ ವೇಳೆಯಲ್ಲಿ ಗಮನ ಸೆಳೆದ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ

ಭಿನ್ನ ಕೆನೆಪದರ ನೀತಿಯಿಂದ ರಾಜ್ಯದ ವಿಧ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಶೂನ್ಯ ವೇಳೆಯಲ್ಲಿ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ಗಮನ ಸೆಳೆದಿದ್ದಾರೆ.

ಧರ್ಮಸ್ಥಳ ಬಗ್ಗೆ ಆಗಲಿ, ಧರ್ಮಾಧಿಕಾರಿಯವರ ವಿರುದ್ಧ ಆಗಲಿ ಯಾರೂ ಇಲ್ಲ: ಸಚಿವ ರಾಮಲಿಂಗಾರೆಡ್ಡಿ

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ಧರ್ಮಸ್ಥಳದ ಕುರಿತಾಗಲಿ ಅಥವಾ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ವಿರುದ್ಧವಾಗಲಿ ಯಾರೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಆಂಧ್ರದಲ್ಲಿ ಮಹಿಳೆಯರಿಗೆ ಉಚಿತ ಬಸ್: ತಿರುಮಲಕ್ಕೆ ಈ ಯೋಜನೆ ಅನ್ವಯಿಸುವುದಿಲ್ಲ ಎಂದ ಸರ್ಕಾರ

ಕರ್ನಾಟಕ ಮತ್ತು ತೆಲಂಗಾಣ ಸರ್ಕಾರಗಳ ಮಾದರಿಯಲ್ಲಿ ಆಂಧ್ರಪ್ರದೇಶದಲ್ಲೂ ಚಂದ್ರಬಾಬು ನಾಯ್ಡು ಸರ್ಕಾರವು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆಯನ್ನು ಘೋಷಿಸಿದೆ.